ಖರ್ಗೆ ಆ್ಯಂಡ್ ಸನ್‌ಗೆ ಪ್ರಚಾರದ ಗೀಳು; ಮಾಜಿ ಸಚಿವ ಬಿ.ಸಿ.ಪಾಟೀಲ ವ್ಯಂಗ್ಯ

Haveri, Ex Minister, BC Patil, Press Byte, About Kharge,
Haveri, Ex Minister, BC Patil, Press Byte, About Kharge,
Published on
ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಚಾರದ ಗೀಳು ಹೆಚ್ಚಾಗಿದೆ. ಸದಾ ಸುದ್ದಿಯಲ್ಲಿ ಇರಬೇಕೆಂದು ಬಯಸಿ ಖರ್ಗೆ ಆ್ಯಂಡ್ ಸನ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ನಿಂದಿಸುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು, ಮೋದಿಯವರನ್ನು ಬೈದರೆ, ಅವರ ಸುಪುತ್ರ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ನಿಂದಿಸುತ್ತಾರೆ. ನಿತ್ಯವೂ ಸುದ್ದಿಯಲ್ಲಿದ್ದು ಪ್ರಚಾರ ಗಿಟ್ಟಿಸಿಕೊಳ್ಳಲು ಹೀಗೆ ಮಾಡುತ್ತಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾತಂತ್ರ್ಯ ಬಂದಾಗಿನಿಂದಲೂ ಹೆಚ್ಚು ಕಾಲ ರಾಜಕಾರಣದಲ್ಲಿ ಇದ್ದವರು. ದೇಶದ ಪ್ರಗತಿ ಬಗ್ಗೆ ಯೋಚನೆ ಮಾಡಬೇಕೇ ವಿನಃ ಪ್ರಧಾನಿಯವರನ್ನು ಅಲ್ಲಗೆಳೆಯಬಾರದು. 11ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿಯನ್ನು ನರೇಂದ್ರ ಮೋದಿ ಅವರು ನಾಲ್ಕನೇ ಸ್ಥಾನಕ್ಕೆ ತಂದಿದ್ದಾರೆ. ಇನ್ನೊಂದು ವರ್ಷದಲ್ಲಿ 3ನೇ ಸ್ಥಾನಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಯಾರು ಉತ್ತಮ ಕೆಲಸ ಮಾಡುತ್ತಾರೆ ಅವರನ್ನು ಹೊಗಳಬೇಕೇ ಹೊರತು ತೆಗಳಬಾರದು ಎಂದು ಸಲಹೆ ನೀಡಿದರು.
ಒಳ ಮೀಸಲಾತಿ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಹಂಚಿಕೆ ಮಾಡಿದ್ದು, ಸರಿಯಾಗಿಲ್ಲ ಅವೈಜ್ಞಾನಿಕವಾಗಿದೆ. ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ಸಮನಾಗಿ ಶೇ.5.25ರಷ್ಟು ನೀಡಿ, ಅಲೆಮಾರಿಗಳಿಗೆ 4.5 ಕೊಟ್ಟು ಕೈತೊಳೆದುಕೊಂಡಿದ್ದಾರೆ. ಬಹಳಷ್ಟು ವರ್ಗಕ್ಕೆ ಅನ್ಯಾಯ ಆಗಿದೆ. ಲಂಬಾಣಿ, ಕೊರಚ, ಕೊರಮ ಹೀಗೆ 63 ಉಪ ಜಾತಿಗಳಿಗೆ ಶೇ.4.5 ಮೀಸಲು ಕೊಟ್ಟಿದ್ದು ಸರಿಯಾಗಿಲ್ಲ. ತಮ್ಮ ಸ್ಥಾನ ಭದ್ರವಾಗಿಸಲು ಈ ಹುನ್ನಾರ ನಡೆಸಿದ್ದಾರೆ. ಒಳ ಮೀಸಲಾತಿಯಿಂದ ಯಾರಿಗೂ ನ್ಯಾಯ ಸಿಕ್ಕಿಲ್ಲ. ಸಾಮಾಜಿಕ ನ್ಯಾಯ ಕಾಪಾಡುವ ಕೆಲಸವಾಗಿಲ್ಲ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net