ಮಾಸೂರು, ಕೋಡ, ರಟ್ಟಿಹಳ್ಳಿಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಬದಲು ಸರ್ಕಾರ ಕೆಳದರ್ಜೆಗೆ ಇಳಿಸಲು ಹೊರಟಿದೆ. ನಾನು ಶಾಸಕನಾಗಿದ್ದಾಗ ಮಾಸೂರು ಆಸ್ಪತ್ರೆಯನ್ನು 32 ಬೆಡ್‌ಗೆ ಮೇಲ್ದರ್ಜೆಗೆ ಏರಿಸಿದ್ದೆ. ರಟ್ಟಿಹಳ್ಳಿ ಆಸ್ಪತ್ರೆಯನ್ನು 100ಬೆಡ್‌ಗೆ ಮೇಲ್ದರ್ಜೆಗೆ ಏರಿಸಿದ್ದೆ. ಇಲ್ಲಿ ಹೆರಿಗೆಗಳು ಆಗುತ್ತಿಲ್ಲ ಎಂಬ ಕಾರಣವೊಡ್ಡಿ ಕೆಳದರ್ಜೆಗೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಹೆರಿಗೆ ಆಗಬೇಕಾದರೆ ಸರಿಯಾದ ವೈದ್ಯರು, ಸೌಲಭ್ಯ ಬೇಕಾಗುತ್ತೆ. ಆದರೆ, ವೈದ್ಯರು, ಸೌಲಭ್ಯಗಳನ್ನೇ ಕೊಟ್ಟಿಲ್ಲ, ಹೀಗೆ ರಾಜ್ಯದಲ್ಲಿ 242 ಆಸ್ಪತ್ರೆಗಳನ್ನು ಕೆಳದರ್ಜೆಗೆ ಇಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸರ್ಕಾರಕ್ಕೆ 1,500 ಕೋಟಿ ರೂ., ಉಳಿತಾಯ ಆಗುತ್ತೆ ಎಂಬ ಲೆಕ್ಕ ಹಾಕಿದ್ದಾರೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ. ಕ್ಷೇತ್ರದ ಶಾಸಕರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ, ಇದು ಸರ್ಕಾರದ ದಿವಾಳಿಯಾಗಿರುವುದರ ಸೂಚಕ ಎಂದು ಬಿ.ಸಿ.ಪಾಟೀಲ ಆಕ್ರೋಶ ಹೊರಹಾಕಿದರು.