ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ

 district jail,
district jail,
Published on
ಹಾವೇರಿ: ತಾಲೂಕಿನ ಕೆರಿಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ಮಹಿಳಾ ಖೈದಿಗಳಿಗೆ ಹೊಲಿಗೆ ಯಂತ್ರಗಳ ವಿತರಿಸುವ ಕಾರ್ಯಕ್ರಮ ಜರುಗಿತು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಪ್ರಾಧಿಕಾರದ ನ್ಯಾಯಾಧೀಶೆ ಶೈಲಜಾ ಎಸ್.ವಿ. ಮಾತನಾಡಿ, ಮಹಿಳಾ ಬಂಧಿಗಳಿಗೆ ರೋಟರಿ ಸಂಸ್ಥೆ ಹೊಲಿಗೆ ಯಂತ್ರ ಪೂರೈಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅವರಿಗೆ ವೃತ್ತಿಪರ ತರಬೇತಿ ನೀಡಿ ಅವರ ನೋವುಗಳನ್ನು ಮರೆಸುವ ಜತೆಗೆ ಭವಿಷ್ಯ ಕಟ್ಟಿಕೊಳ್ಳಲು ಜಿಲ್ಲಾ ಕಾರಾಗೃಹ ರಚನಾತ್ಮ ಕೆಲಸ ಮಾಡಲಿ ಎಂದರು.
ರೋಟರಿ ಅಧ್ಯಕ್ಷ ಕಾಶೀನಾಥ ಅರಾವತ, ಇನ್ನರ್‌ವ್ಹೀಲ್ ಅಧ್ಯಕ್ಷೆ ವಂದನಾ ಮಾಗನೂರ ಹಾಗೂ ವೃತ್ತಿ ಕೌಶಲ ತರಬೇತಿ ನೀಡಿದ ಶಾಲಿನಿ ಕಮ್ಮಾರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕಿ ನಾಗರತ್ನಮ್ಮ ಮಾತನಾಡಿ, ಜಿಲ್ಲಾ ಕಾರಾಗೃಹ ಎಲ್ಲ ಬಂಧಿಗಳ ಮಾನಸಿಕ ಸ್ವಾಸ್ಥ್ಯ ಕಾಪಾಡುವ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಂದರ್ಶಕ ಮಂಡಳಿಯ ಸದಸ್ಯೆ ಪರಿಮಳಾ ಜೈನ್, ಪರಿಸರಪ್ರೇಮಿ ಮಾಧುರಿ ದೇವಧರ, ಡಿ.ಎಲ್.ಎಸ್.ಸಿ ಸದಸ್ಯ ಚಂದ್ರಶೇಖರ ಮಾಳಗಿ, ನಾಗರಾಜ ಇಚ್ಚಂಗಿ ಎಫ್.ಎಸ್.ಎಲಿಗಾರ ಹಾಗೂ ರಾಜು ಪಂಪಣ್ಣನವರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net