ಹಾವೇರಿ : ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ..ಫ್ಯಾಕ್ಸ್ ಮೂಲಕ ಕೋಟ್೯ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೋಟ್೯ ಕಲಾಪ ನಿಲ್ಲಿಸಿದ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ವಿವಿಧ ಸಿಬ್ಬಂದಿ ಕೋಟ್೯ನಿಂದ ಹೊರ ಬಂದರು. .ಕೋರ್ಟ್ ಕೆಲಸಕ್ಕೆಂದು ಬಂದಿದ್ದ ಸಾರ್ವಜನಿಕರು, ಕಕ್ಷಿದಾರರನ್ನು ಪೊಲೀಸರು ಹೊರಗೆ ಕಳುಹಿಸಿದರು..ಆತಂಕಕ್ಕೀಡಾದ ಕೆಲ ಜನ ಕೋಟ್೯ ನಿಂದ ಓಡಿ ಹೋದರು. .ಇದರ ಬೆನ್ನಲ್ಲೇ ಕೋರ್ಟ್ ಆವರಣಕ್ಕೆ ಧಾವಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತಪಾಸಣೆ ನಡೆಸಿದರು.