ಸಿರಿಧಾನ್ಯ ಮೌಲ್ಯವರ್ಧನೆ ತರಬೇತಿ ಶಿಬಿರ 31ರಂದು

Haveri, Devihosur, Hosrty, College, Millet, Training,
Haveri, Devihosur, Hosrty, College, Millet, Training,
Published on
ಹಾವೇರಿ: ಅನುಸೂಚಿತ ಜಾತಿ (ಎಸ್‌ಸಿ) ರೈತರ ಆರ್ಥಿಕ ಸಬಲೀಕರಣ ಹಾಗೂ ಸಿರಿಧಾನ್ಯ ಆಧಾರಿತ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಿರಿಧಾನ್ಯ (ಮಿಲೆಟ್) ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ತಾಲೂಕಿನ ದೇವಿಹೊಸೂರಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಜು.31ರಂದು ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ ವ್ಯಾಪ್ತಿಯ ದೇವಿಹೊಸೂರಿನ ಡಿಎಸ್‌ಎಲ್‌ಡಿ ಕಾಲೇಜ್ ಆಫ್ ಹಾರ್ಟಿಕಲ್ಚರ್ ಇಂಜಿನಿಯರಿಂಗ್ ಆ್ಯಂಡ್ ಫುಡ್ ಟೆಕ್ನಾಲಜಿ ಹಾಗೂ ಐಸಿಎಆರ್ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ, ಹೈದರಾಬಾದ್ ಸಹಯೋಗದಲ್ಲಿ ಶ್ರೀ ಅನ್ನ ಯೋಜನೆಯಡಿ ಈ ಕಾರ್ಯಕ್ರಮ ನಡೆಯಲಿದೆ.
ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ವಿವಿಧ ಆಹಾರ ಉತ್ಪನ್ನಗಳ ತಯಾರಿಕೆ, ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರುಕಟ್ಟೆ ವ್ಯವಸ್ಥೆ ಹಾಗೂ ಉದ್ಯಮಶೀಲತೆ ಕುರಿತು ತಜ್ಞರಿಂದ ಪ್ರಾಯೋಗಿಕ ಹಾಗೂ ತಾಂತ್ರಿಕ ತರಬೇತಿ ನೀಡಲಾಗುವುದು. ಅನುಸೂಚಿತ ಜಾತಿಗೆ ಸೇರಿದ ಆಸಕ್ತ ರೈತರು ಶಿಬಿರದಲ್ಲಿ ಭಾಗವಹಿಸಲು ಜು.28ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ.ನೇತ್ರಾವತಿ ಅಶೋಕ ಪಾಟೀಲ, ಸಹಾಯಕ ಪ್ರಾಧ್ಯಾಪಕರು, ಡಿಎಸ್‌ಎಲ್‌ಡಿ ಕಾಲೇಜ್, ದೇವಿಹೊಸೂರು, ಹಾವೇರಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net