01-07-1987ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ-ಸ್ಥಳವನ್ನು ಸ್ಥಾಪಿಸುವ 12 ದಾಖಲೆಗಳ ಪಟ್ಟಿಯಿಂದ ಅಗತ್ಯವಾದ ದಾಖಲೆ ಸಲ್ಲಿಸಬೇಕು. ದಿನಾಂಕ 01-07-1987ರಿಂದ 02-12-2004ರಲ್ಲಿ ಜನಿಸಿದವರು ಸ್ವಯಂ ಜನ್ಮ ದಿನಾಂಕ/ ಸ್ಥಳವನ್ನು ದೃಢಪಡಿಸುವ ದಾಖಲೆ, ತಂದೆ ಅಥವಾ ತಾಯಿಯ ಜನ್ಮದಿನಾಂಕ/ ಸ್ಥಳವನ್ನು ದೃಢಪಡಿಸುವ ದಾಖಲೆ, ಹಾಗೂ ದಿನಾಂಕ 02-12-2004ರ ನಂತರ ಜನಿಸಿದವರು ಸ್ವಯಂ, ಜನ್ಮ ದಿನಾಂಕ/ ಸ್ಥಳವನ್ನು ದೃಢಪಡಿಸುವ ದಾಖಲೆ, ತಂದೆಯ ಜನ್ಮದಿನ/ ಸ್ಥಳವನ್ನು ದೃಢಪಡಿಸುವ ದಾಖಲೆ, ತಾಯಿ ಜನ್ಮದಿನ/ ಸ್ಥಳ ದೃಢಪಡಿಸುವ ದಾಖಲೆ, ಯಾವುದೇ ಪಾಲಕರು ಭಾರತೀಯರಲ್ಲದಿದ್ದರೆ, ಜನನದ ಸಮಯದಲ್ಲಿ ಪೋಷಕರ ಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ, ಭಾರತದ ಹೊರಗೆ ಜನಿಸಿದವರು ಅಥವಾ ನೈಸರ್ಗಿಕವಾಗಿ ಜನಿಸಿದವರು, ಭಾರತದ ಹೊರಗೆ ಜನನ, ವಿದೇಶದಲ್ಲಿರುವ ಭಾರತೀಯ ಮಿಷನ್‌ನಿಂದ ಜನನ ನೋಂದಣಿ ಪುರಾವೆ, ನೈಸರ್ಗಿಕೀಕರಣ, ಪೌರತ್ವ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು.