ಎಫ್‌ಆರ್‌ಎಸ್, ಇಕೆವೈಸಿ, ಪೋಷಣ ಟ್ರ್ಯಾಕರ್, ಆನ್‌ಲೈನ್ ಕೆಲಸಗಳನ್ನು ಗುಣಮಟ್ಟದ ಮೊಬೈಲ್, 5ಜಿ ಡಾಟಾ ಕೇಂದ್ರಗಳಿಗೆ ವೈಫೈ ನೀಡದೇ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ. ಒಟಿಪಿ ಹಾಕುವುದರಿಂದ ಲಕ್ಷಾಂತರ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜನಗಣತಿ ಬಿಎಲ್‌ಒ ಕೆಲಸಗಳು ಸೇರಿದಂತೆ ಹೆಚ್ಚವರಿ ಕೆಲಸದ ಒತ್ತಡ ಕಾರ್ಯಕರ್ತೆಯರ ಮೇಲೆ ಹೇರಲಾಗುತ್ತಿದ್ದು, ನಿಗದಿತ ಕಾರ್ಯಗಳ ಹೊರತು ಅನ್ಯ ಕೆಲಸಗಳಿಂದ ಮುಕ್ತಗೊಳಿಸಬೇಕು ಎಂದರು.