ಮಹಾಶರಣೆ ದಾನಮ್ಮದೇವಿ ಸದಾ ಪ್ರಾತಸ್ಮರಣೀಯರು; ಹಾವೇರಿ ದಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಹುಕ್ಕೇರಿ ಮಠದ ಶ್ರೀಗಳ ಹೇಳಿಕೆ

Danamma Devi
Danamma Devi
Published on

ಪ್ರಮುಖ ಮುಖ್ಯಾಂಶಗಳು

  • ಹಾವೇರಿ ದಾನಮ್ಮದೇವಿ ದೇವಸ್ಥಾನದ 19ನೇ ವರ್ಷದ ಜಾತ್ರಾ ಮಹೋತ್ಸವ
  • ಲಿಂಗಪೂಜೆ ದಾಸೋಹ ಸೇವೆ, ಸಾಮಾಜಿಕ ಸೇವೆಯಿಂದಲೇ ಲಿಂಗಮ್ಮ ದಾನಮ್ಮನಾದಳು
  • 12ನೇ ಶತಮಾನದ ಕಾಲಘಟ್ಟದಲ್ಲಿಯೇ ಸಾಮೂಹಿಕ ವಿವಾಹಗಳಿಗೆ ನಾಂದಿ ಹಾಡಿದ ಮಾಹಾಶರಣೆ,
ಹಾವೇರಿ: ಲಿಂಗಪೂಜೆ ದಾಸೋಹ ಸೇವೆ, ಸಾಮಾಜಿಕ ಸೇವೆಯಿಂದಲೇ ಲಿಂಗಮ್ಮ ದಾನಮ್ಮನಾದಳು. 12ನೇ ಶತಮಾನದ ಕಾಲಘಟ್ಟದಲ್ಲಿಯೇ ಸಾಮೂಹಿಕ ವಿವಾಹಗಳಿಗೆ ನಾಂದಿ ಹಾಡಿದ ಮಾಹಾಶರಣೆ, ವರದಾನಿ ಗುಡ್ಡಾಪುರ ಶ್ರೀ ದಾನಮ್ಮದೇವಿ ಪ್ರಾತಸ್ಮರಣೀಯರು ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ದಾನಮ್ಮದೇವಿ ದೇವಸ್ಥಾನದ 19ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣದ ಶರಣರು ಸ್ತ್ರೀ ಸಮಾನತೆಯ ಹರಿಕಾರರು. ಈ ಸಮಾನತೆಯ ಕಾರಣದಿಂದಾಗಿಯೇ ಅನೇಕ ಶರಣೆಯರು ಅನುಭವ ಮಂಟಪದಲ್ಲಿ ಸೇರುವಂತಾಯಿತು. ನಿತ್ಯ ಲಿಂಗಾರ್ಚನೆ, ಶಿವಯೋಗ ಸಾಧನೆ ಮಾಡುವುದರಿಂದ ಅಪಮೃತ್ಯುಗಳು ತಪ್ಪುವುದಾಗಿ ಶರಣರು ಹೇಳಿದರು. ನಡೆ ನುಡಿ ಒಂದಾದ ಸಾರ್ಥಕ ಜೀವನ ನಡೆಸಿದರು ಎಂದರು.
ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರೇ ಶರಣ ಸಂಕುಲದ ಕೇಂದ್ರ ಬಿಂದು. ಆದರ್ಶ ಕೇವ ಮಾತಿನಲ್ಲಿ ಇರಬಾರದು, ಆಚರಣೆಯಲ್ಲಿ ಇರಬೇಕು. ಸಮಸಮಾಜದ ನಿರ್ಮಾಣ ಮತ್ತು ಸ್ತ್ರೀ ಸಮಾನತೆಯ ಕಾರಣದಿಂದಲೇ 12ನೇ ಶತಮಾನದ ಕ್ರಾಂತಿಯಾಗಿದ್ದು ಇತಿಹಾಸ. ದಾನಮ್ಮ ಸೇವೆ ಮತ್ತು ದಾಸೋಹದ ಪ್ರತೀಕವಾಗಿದ್ದಾರೆ. ಕಾರ್ತಿಕದಲ್ಲಿ ಹಚ್ಚುವ ದೀಪಗಳು ಹೊರಗಿನ ಕತ್ತಲೆಯನ್ನು ಕಳೆದರೆ ಶರಣರ, ಮಹಾತ್ಮರ ತತ್ವಾದರ್ಶಗಳು ನಮ್ಮ ಒಳಗಿನ ಕತ್ತಲೆಯನ್ನು ಕಳೆದು ನಮ್ಮನ್ನು ಸುಜ್ಞಾನದ ಕಡೆಗೆ ನಡೆಸುತ್ತವೆ ಎಂದರು. ರಾಮದುರ್ಗದ ಶರಣ ಶಾಹಿತಿ ಪ್ರೊ.ಸಿದ್ದಣ್ಣ ಲಂಗೋಟಿ ಮಾತನಾಡಿ, ನಮ್ಮ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜಗತ್ತಿನ ಪ್ರಥಮ ಪಾರ್ಲಿಮೆಂಟ್ 12ನೇ ಶತಮಾನದ ಅನುಭವ ಮಂಟಪವಾಗಿದೆ. 770 ಅಮರಗಣಂಗಳು ನೀಡಿದ ವಚನ ಸಾಹಿತ್ಯ ಅತ್ಯಂತ ಶ್ರೇಷ್ಠ ಮತ್ತು ಸರ್ವ ಕಾಲಕ್ಕೂ ಸಲ್ಲುವ ವಿಶಿಷ್ಠ ಸಾಹಿತ್ಯವಾಗಿದೆ. ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷೆ ಶೊಭಾತಾಯಿ ಮಾಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನವು ಭಕ್ತರ ಸಹಕಾರದಿಂದ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ದಾನಮ್ಮನ ಆಶೀರ್ವಾದದಿಂದ ನಾಡಿಗೆ ಒಳಿತಾಗಲಿ ಎಂದರು.
ಬುಧವಾರ ಬೆಳಗ್ಗೆ ಹಾವೇರಿ ಗುರುಪಾದ ದೇವರವಠದ ಶ್ರೀ ಶಿವಯೊಗಿ ಶಿವಾಚಾರ್ಯ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು. ಗುರುವಾರ ಬೆಳಗ್ಗೆ ಶ್ರೀ ದಾನಮ್ಮದೇವಿ ಪಾಲಕಿ ಉತ್ಸವ ಹರಸೂರು ಬಣ್ಣದಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು. ಲಕ್ಕಣ್ಣ ಸಹೋದರಿಯರು ಪ್ರಾರ್ಥಿಸಿದರು. ಶಿವಯೋಗಿ ಅಂಗಡಿ ವಂದಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಮಧ್ಯಾಹ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಗಿರೀಶ ತುಪ್ಪದ, ಶಿವಪ್ಪ ಕೋರಿಶೆಟ್ಟರ, ಬೆಳಗಾವೆಪ್ಪ ಬೆಳಗಾವಿ, ಅಜಿತ ಮಾಗಾವಿ, ಸಂದೀಪ ಮಾಗಾವಿ, ಶಂಭುಲಿಂಗಪ್ಪ ಹಂದ್ರಾಳ, ಸಂಜಯ ಮಾಗಾವಿ, ಮಹಾಂತಪ್ಪ ಹಲಗಣ್ಣನವರ, ಪ್ರಕಾಶ ಹಂದ್ರಾಳ, ವಿ.ಜಿ.ಯಳಗೇರಿ, ಶಿವಬಸಪ್ಪ ಮುದ್ದಿ, ನಿಜಲಿಂಗಪ್ಪ ಕಾಳೆ, ಶಿವಯೋಗಿ ಮುದ್ದಿ, ಶಿವಬಸಪ್ಪ ಚೌಶೆಟ್ಟಿ, ಅಂದಾನೆಪ್ಪ ಗಡಾದ, ಮುರಿಗೆಪ್ಪ ಕಡೇಕೊಪ್ಪ, ಗಂಗಣ್ಣ ಮಾಸೂರ, ಉಳಿವೆಪ್ಪ ಪಂಪಣ್ಣನವರ, ಶಿವಯೋಗಿ ಬೆನ್ನೂರ, ಸಿ.ಜಿ.ತೊಟಣ್ಣನವರ, ಶಿವಯೋಗಿ ಅಂಗಡಿ, ನಿರಂಜನ ತಾಂಡೂರ, ಶಿವಬಸಪ್ಪ ಹಲಗಣ್ಣನವರ, ಶಿವಲಿಂಗಪ್ಪ ಕಲ್ಯಾಣಿ, ಗುರಣ್ಣ ಸಿಮೀಕೇರಿ, ವಿರುಪಾಕ್ಷಪ್ಪ ಹತ್ತಿಮತ್ತೂರ, ಜಗದೀಶ ಹತ್ತಿಕೋಟಿ, ಸಂತೋಷ ಮಾಸೂರ, ಶಿವಯೋಗಿ ವಾಲಿಶೆಟ್ಟರ, ಶಿವಯೋಗಿ ಮನ್ನಂಗಿ, ಶಿವರಾಜ ಕಾಯಕದ, ನಾಗಪ್ಪ ಹಾವೇರಿ, ಸುರೇಶಬಾಬು ಯಳಮಲ್ಲಿ, ಸುರೇಶ ರೊಡ್ಡಪ್ಪನವರ, ಅರ್ಚಕರಾದ ಕುಮಾರಸ್ವಾಮಿ ನರೇಂದ್ರಮಠ, ಚಂದ್ರಶೇಖರಯ್ಯ, ಬಸವರಾಜ, ಲೀಲಾವತಿ ಮಾಗಾವಿ, ಗಿರಿಜಮ್ಮ ತಾಂಡೂರ, ಸುಂದರಕ್ಕ ತುಪ್ಪದ, ನೀಲವ್ವ ಯರೇಸಿಮಿ, ಗಂಗವ್ವ ನಂದಿವಾಡ, ವಿಜಯಲಕ್ಷ್ಮೀ ಮಾಸೂರ, ರಾಜೇಶ್ವರಿ ಯಳಮಲ್ಲಿ, ಜಯಶ್ರೀ ಮರ್ತೂರ, ಉಮಾದೇವಿ ವಾಲಿಶೆಟ್ಟರ ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಬಾಕ್ಸ್
ಆದರ್ಶ ದಂಪತಿ ಪ್ರಶಸ್ತಿ
ದಿ.ರಾಜಶೇಖರ ಮಾಗಾವಿ ಸ್ಮರಣಾರ್ಥ ಆದರ್ಶ ದಂಪತಿ ಪ್ರಶಸ್ತಿಯನ್ನು ರಾಮದುರ್ಗದ ಶರಣ ಸಾಹಿತಿ ಸಿದ್ದಣ್ಣ ಲಂಗೋಟಿ- ಕಲ್ಯಾಣಮ್ಮ ಲಂಗೋಟಿ ದಂಪತಿಗೆ ಹಾಗೂ ಲೀಲಾವತಿ ಸಿದ್ದೇಶ್ವರ ಮಾಗಾವಿ ಅವರಿಂದ ಕೊಡಲ್ಪಡುವ ವರ್ಷದ ವ್ಯಕ್ತಿ ಶ್ರೀ ದಾನೇಶ್ವರಿ ಪ್ರಶಸ್ತಿಯನ್ನು ಹಾವೇರಿಯ ಹಿರಿಯ ಸಾಹಿತಿ ಸಿದ್ದುಮತಿ ನೆಲವಿಗಿ ಅವರಿಗೆ ಪ್ರದಾನ ಮಾಡಲಾಯಿತು.
ಕೋಟ್:
ಜಗತ್ತಿನಲ್ಲಿಯೇ ಧಾರ್ಮಿಕ ಕ್ಷೇತ್ರಕ್ಕೆ ಭಾರತದಲ್ಲಿ ವಿಶಿಷ್ಠವಾದ ಮತ್ತು ಗೌರವಯುತವಾದ ಸ್ಥಾನವಿದೆ. ನಮ್ಮ ದೇಶದಲ್ಲಿ ಕಾಲ ಕಾಲಕ್ಕೆ ಸಂತ ಮಹಾಂತರು, ಶರಣ ಶರಣೆಯರು, ದಾಸರು, ಮಹಾತ್ಮರು ಜನಿಸಿ ಆದರ್ಶವಾದ ಬದುಕನ್ನು ಬಾಳುವ ಜತೆಗೆ ಅಮೂಲ್ಯವಾದ ತತ್ವಾದರ್ಶಗಳನ್ನು ಜಗತ್ತಿಗೆ ನೀಡಿದ್ದಾರೆ. ದಾನಮ್ಮನವರ ಚರಿತ್ರೆ ಮತ್ತು ಅವರ ಸಾಮಾಜಿಕ ಮತ್ತು ಧಾರ್ಮಿಕ ಸಾಧನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ.
ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net