

ಅರಣ್ಯ ಪ್ರದೇಶ ಹಾಗೂ ಕಾಡಂಚಿನಲ್ಲಿ ಯಾರೂ ಮರ, ಗಿಡಗಳನ್ನು ಕಡಿಯಬಾರದು. ನಿಯಮ ಮೀರಿ ಯಾರಾದರೂ ಮರ, ಗಿಡಗಳನ್ನು ಕಡಿದರೆ ಅಂಥವರ ವಿರುದ್ಧ ಅರಣ್ಯ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಆರ್‌ಎಫ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
ಅಂಗನವಾಡಿಗಳಿಗೂ ಸಿಲಿಂಡರ್ ಕೊರತೆ ಇಲ್ಲ. ಒಂದು ಅಂಗನವಾಡಿಗೆ ವರ್ಷಕ್ಕೆ 8 ಸಿಲಿಂಡರ್ ಕೊಡಲಾಗುತ್ತಿತ್ತು. ಈಗ ಗರ್ಭಿಣಿಯರು ಹಾಗೂ ಬಾಣಂತಿಯರ ಮನೆಗೆ ರೇಷನ್ ಕೊಡಲಾಗುತ್ತಿದೆ. ಹಾಗಾಗಿ, 8ರ ಬದಲು 4 ಸಿಲಿಂಡರ್ ಕೊಡಲಾಗುತ್ತಿದೆ. ಮೂರು ತಿಂಗಳಿಗೆ ಒಂದು ಸಿಲಿಂಡರ್ ಬೇಕಾಗುತ್ತದೆ. ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್ ಪೂರೈಕೆ ಇದೆ.