

ಶಾಸಕರ ಅಭಿಪ್ರಾಯ ಕೇಳದೇ, ಸಮೀಕ್ಷೆ ಮಾಡದೇ ಮೋಹನ ಲಿಂಬಿಕಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕೂಡಲೇ ಅಭ್ಯರ್ಥಿ ಬದಲಾಯಿಸಿ ಅಹಿಂದ ಮುಖಂಡನಾದ ನನಗೆ ಟಿಕೆಟ್ ಕೊಡಬೇಕು. ಇಲ್ಲವೇ ಸಿಎಂ, ಡಿಸಿಎಂ ಜತೆ ಮಾತುಕತೆ ನಡೆಸಿ ಎಂಎಲ್‌ಸಿಗೆ ಸಮಾನವಾದ ರಾಜಕೀಯ ಸ್ಥಾನಮಾನ ಕೊಡಬೇಕು. ಇಲ್ಲದಿದ್ದರೆ ಫೆ.14ರಂದು ಹಾವೇರಿಯಲ್ಲಿ ಅಹಿಂದ ಸಮಾವೇಶ ಕೈಬಿಡುವುದಿಲ್ಲ.