ಡಿಕೆಶಿ ಪ್ರಮಾಣ ವಚನ ಹಿನ್ನೆಲೆ ಕಾಂಗ್ರೆಸ್ ವಿಜಯೋತ್ಸವ ; ಪಟಾಕಿ ಸಿಡಿ, ಸಿಹಿ ಹಂಚಿ ಸಂಭ್ರಮಾಚರಣೆ

Haveri, Congress, CM, DKShi, Oath,
Haveri, Congress, CM, DKShi, Oath,
Published on
ಹಾವೇರಿ: ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು.
ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಡಿಕೆ, ಡಿಕೆ ಎಂದು ಘೋಷಣೆ ಕೂಗಿ ಜಯಘೋಷ ಮೊಳಗಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಎಂ.ಎಂ.ಹಿರೇಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ.ಮೈದೂರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗೆಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮೆರವಾಡೆ, ಶಹರ ಘಟಕದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರು, ಶಹರ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಉಮರ್ ಇನಾಮದಾರ, ಡಿ.ಕೆ.ಶಿವಕುಮಾರ ಅಭಿಮಾನಿ ಬಳಗದ ಅಲ್ತಾಫ್ ಚೋಪದಾರ್, ವೀರಣ್ಣ ಪಾಟೀಲ, ನೂರ್ ಅಹ್ಮದ್ ಬೋರಗಲ್, ಸುಭಾಷ ಚವ್ಹಾಣ, ಗದಿಗೆಪ್ಪ ನಲೋಗಲ್ಲ, ಮಹಾಲಿಂಗಯ್ಯ ಪಾಟೀಲ, ಜಮೀರ್ ಜಿಗರಿ, ರಾಧಾ ಸವಣೂರ, ಮಮತಾ ಜಾಬಿನ್, ಬಸವರಾಜ ಬಳ್ಳಾರಿ, ಪ್ರಸನ್ನ ಹಿರೇಮಠ, ಕರಬಸಪ್ಪ ಹಲಗಣ್ಣನವರ, ಬಸವರಾಜ ಜಾಬಿನ, ರಮೇಶ ಮಾಳವದೆ, ರಾಜು ಡೊಳ್ಳಿನ, ಚನ್ನಬಸಪ್ಪ ಅಂಗರಗಟ್ಟಿ, ಜಾಫರ್ ಅತ್ತಾರ, ಶೋಯಬ್ ಬಡಿಗೇರ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net