ಹಾವೇರಿ: ಹಾವೇರಿ ನಗರಕ್ಕೆ ನೀರು ಸರಬರಾಜು ಮಾಡುವ ತುಂಗಭದ್ರ ನದಿಯ ಕಂಚಾರಗಟ್ಟಿ ಜಾಕವೆಲ್‌ನಲ್ಲಿ ಸ್ಟಾಟರ್ ರಿಪೇರಿ ಕಾಮಗಾರಿ ಇರುವುದರಿಂದ ಜು.17ರಿಂದ 19ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತ ಎಚ್.ಕಾಂತರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.