ಹಾವೇರಿಯಲ್ಲಿ ಜು.6ರಂದು ಮೋಡ ಬಿತ್ತನೆಗೆ ಚಾಲನೆ; ಶಾಸಕ ಪ್ರಕಾಶ ಕೋಳಿವಾಡ ಮಾಹಿತಿ

Haveri, Cloud Seeding, MLA, Prakash Koliwada,
Haveri, Cloud Seeding, MLA, Prakash Koliwada,
Published on
ಹಾವೇರಿ: ಹಾವೇರಿ ಜಿಲ್ಲೆಯ ಆರೂ ಶಾಸಕರ ವೈಯಕ್ತಿಕ ಖರ್ಚಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜು.6ರಂದು ಚಾಲನೆ ನೀಡಲಾಗುವುದು ಎಂದು ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದ್ದಾರೆ. 
 ದೇಶದಲ್ಲಿ ಮೋಡ ಬಿತ್ತನೆ ಮಾಡಲು ಕ್ಯಾತಿ ಕ್ಲೈಮೇಟ್ ಮೊಡಿಫಿಕೇಷನ್ ಕನ್ಸಲ್ಟಂಟ್ ಸಂಸ್ಥೆಗೆ ಡಿಜಿಸಿಎ (ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ) ನಿಂದ ಅನುಮತಿ ದೊರೆತಿದೆ. ಜು.7ರಿಂದ ಮೋಡ ಬಿತ್ತನೆ ಆರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ, ಹವಾಮಾನ ವಿಜ್ಞಾನಿಗಳ ಸಲಹೆ ಮೇರೆಗೆ ಜು.6, 7ರಂದು ಮೋಡಗಳ ಲಭ್ಯತೆ ಹೆಚ್ಚಾಗಿರುವ ಕಾರಣ ಸೋಮವಾರ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯ ಆರೂ ಶಾಸಕರು ಭಾಗವಹಿಸುವರು ಎಂದರು.
 ರಾಜ್ಯದಲ್ಲಿ ಬರಗಾಲವಿದೆ. ಜಿಲ್ಲೆಯ ಎಲ್ಲ ಶಾಸಕರ ಪ್ರಣಾಳಿಕೆ ಭರವಸೆಯಂತೆ ವೈಯಕ್ತಿಕವಾಗಿ ಹಣ ಕೊಟ್ಟು ಮೋಡ ಬಿತ್ತನೆ ಮಾಡಲಾಗುತ್ತಿದೆ. ಒಂದು ತಾಸಿಗೆ 15 ಲಕ್ಷ ರೂ. ಖರ್ಚಾಗಲಿದೆ. ಇದನ್ನು ಶಾಸಕರೇ ಭರಿಸುತ್ತೇವೆ. ಈಗಾಗಲೇ ಹುಬ್ಬಳ್ಳಿಗೆ ಏರ್‌ಕ್ರಾಫ್ಟ್ ಬಂದಿದ್ದು, ಎರಡು ದಿನ ಪೈಲಟ್‌ಗಳ ತರಬೇತಿ ಪೂರ್ಣಗೊಂಡಿದೆ. ಎಲ್ಲೆಲ್ಲಿ ಮೋಡ ಇದೆಯೋ ಎಂಬುದನ್ನು ಪರಿಶೀಲನೆ ನಡೆಸಿ, ವಿಜ್ಞಾನಿಗಳ ಸಲಹೆಯಂತೆ ಮೋಡ ಬಿತ್ತನೆ ಮಾಡಲಾಗುವುದು. ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಹಾನಗಲ್ಲ, ಶಿಗ್ಗಾಂವ ಹಾಗೂ ಸವಣೂರು ತಾಲೂಕಿನಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ‘ವಿಜಯವಾಣಿ’ಗೆ ತಿಳಿಸಿದರು. 
ಕೆಮಿಕಲ್‌ನಿಂದ ಹಾನಿ ಇಲ್ಲ 
ಕೇಂದ್ರ ಸರ್ಕಾರದ ಮಿನಿಸ್ಟರಿ ಆಫ್ ಅರ್ಥ್ ಸೈನ್ಸ್ ಸಂಶೋಧನೆ ಮಾಡಿದ್ದು, ಮೋಡ ಬಿತ್ತನೆಯಿಂದ ಶೇ.20ರಿಂದ 40ರಷ್ಟು ಮಳೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳಿದೆ. ಮೋಡ ಇರುವ ಕಡೆ ವಿಮಾನ ತೆಗೆದುಕೊಂಡು ಹೋಗಿ, ಸಿಲ್ವರ್ ಐಡೈಡ್ ಕೆಮಿಕಲ್ ಸ್ಟ್ರೇ ಮಾಡಲಾಗುತ್ತದೆ. ಈ ಕೆಮಿಕಲ್‌ನಿಂದ ಯಾರಿಗೂ ಹಾನಿ ಆಗುವುದಿಲ್ಲ ಎಂದು ಶಾಸಕ ಕೋಳಿವಾಡ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net