ಕುರುಬಗೊಂಡ, ದೇವಿಹೊಸೂರ ರಸ್ತೆ ಕಾಮಗಾರಿಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ

Haveri, Byadagi, MLA, Shivannanavar,
Haveri, Byadagi, MLA, Shivannanavar,
Published on
ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾವೇರಿ ತಾಲೂಕಿನ ಕುರುಬಗೊಂಡ, ದೇವಿಹೊಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ 2.49 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಇತ್ತೀಚೆಗೆ ಚಾಲನೆ ನೀಡಿದರು.
ಕುರುಬಗೊಂಡ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕುರುಬಗೊಂಡ-ಹೊಂಬರಡಿ ರಸ್ತೆ ಅಭಿವೃದ್ಧಿ, 30 ಲಕ್ಷ ರೂ. ವೆಚ್ಚದಲ್ಲಿ ಕರುಬಗೊಂಡದಿಂದ ಬ್ಯಾಡಗಿ ರಸ್ತೆ, 75ಲಕ್ಷ ರೂ., ವೆಚ್ಚದಲ್ಲಿ ಕಬ್ಬೂರು ತಾಂಡಾದಿಂದ ಸೂಡಂಬಿ ರಸ್ತೆಯವರೆಗೆ ಮುಂದುವರೆದ ಕಾಮಗಾರಿ, 80 ಲಕ್ಷ ರೂ. ವೆಚ್ಚದಲ್ಲಿ ಎಂ.ಎ. ತಿಮ್ಮಾಪುರದಿಂದ ಶಿವಾಜಿನಗರ ತಾಂಡಾ ರಸ್ತೆ ಅಭಿವೃದ್ಧಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ದೇವಿಹೊಸೂರು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ 5 ಲಕ್ಷ ರೂ. ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ಊಟದ ಹಾಲ್‌ಅನ್ನು ಉದ್ಘಾಟಿಸಿದರು.
ದೇವಿಹೊಸೂರು ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಕಾಮಗಾರಿಗೆ, 15 ಲಕ್ಷ ರೂ. ವೆಚ್ಚದಲ್ಲಿ ದೇವಿಹೊಸೂರ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಗಟಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ದೇವಿಹೊಸೂರ, ಕುರಬಗೊಂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಮಹೇಶ ಹೆಡಿಯಾಲ, ಮೂಕಪ್ಪ ನರೇಗಲ್ಲ, ಅನೀಲ ಸಾಲಿಮಠ, ಗ್ರಾಮಸ್ಥರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net