ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು. ಬೆಳಗ್ಗೆಯಿಂದ ಕಾಕಡಾರತಿ, ಕ್ಷೀರಾಭಿಷೇಕ, ಮಂಗಳಾರತಿ ನೆರವೇರಿತು. ಬಳಿಕ ಗುರು ಪಾದುಕೆ ಪೂಜೆ ಮತ್ತು ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ನೈವೇದ್ಯ ಆರತಿ, ಭಜನಾ ಸೇವೆ ಜರುಗಿತು. ಸಂಜೆ ಧೂಪಾರತಿ ಹಾಗೂ ಪಾಲಿಕೆ ಉತ್ಸವ ನಂತರ ಕಾರ್ತಿಕ ದೀಪೋತ್ಸವ ನೆರವೇರಿತು. ಸಹಸ್ರಾರು ಭಕ್ತರು ಬಾಬಾರ ದೀಪ ಬೆಳಗಿಸಿ ಭಕ್ತಿ ಮೆರೆದರು. ಬಳಿಕ ಭಕ್ತರಿಂದ ಅನ್ನಸಂತರ್ಪಣೆ ಸೇವೆ ನಡೆಯಿತು. ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.