ಹಾವೇರಿ; ಹೊಂಡದಲ್ಲಿ ಕಾಲುಜಾರಿ ಬಿದ್ದು ಅಪ್ಪ- ಮಗ ಸಾವು

Haveri, Aladakatti, Death, Suicide,
Haveri, Aladakatti, Death, Suicide,
Published on
ಹಾವೇರಿ: ವಾಕಿಂಗ್ ಮಾಡುವಾಗ ಹೊಂಡದಲ್ಲಿ ಕಾಲುಜಾರಿ ಬಿದ್ದು ತಂದೆ- ಮಗ ಇಬ್ಬರೂ ಮೃತಪಟ್ಟ ಧಾರುಣ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಗ್ರಾಮದ ಶಂಭುಲಿಂಗಪ್ಪ ಫಕ್ಕೀರಪ್ಪ ಹಂಸಭಾವಿ (40) ಹಾಗೂ ಈತನ ಪುತ್ರ ಶರತ ಶಂಭುಲಿಂಗಪ್ಪ ಹಂಸಭಾವಿ (8) ಮೃತಪಟ್ಟವರು.
ಶಂಭುಲಿಂಗಪ್ಪ ಅಂಗವಿಕಲನಾಗಿರುವ ಮಗ ಶರತನನ್ನು ಕರೆದುಕೊಂಡು ಬೆಳಗ್ಗೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದರು. ಗ್ರಾಮದ ಹೊಂಡದ ಬಳಿ ವಾಕಿಂಗ್ ಮಾಡುವಾಗ ಶರತ್ ಕಾಲುಜಾರಿ ನೀರಿನ ಹೊಂಡದಲ್ಲಿ ಬಿದ್ದಿದ್ದ. ಮಗನನ್ನು ರಕ್ಷಿಸಲು ಮುಂದಾದ ತಂದೆಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net