ಆಲದಕಟ್ಟಿ ಬಳಿ ಚಕ್ಕಡಿಗೆ ಲಾರಿ ಡಿಕ್ಕಿ; ಒಂದು ಎತ್ತು, ಆರು ಜನರಿಗೆ ಗಾಯ

Acident, Chakkadi,
Acident, Chakkadi,
Published on

ಪ್ರಮುಖ ಮುಖ್ಯಾಂಶಗಳು

  • ಚಕ್ಕಡಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ
  • ಒಂದು ಎತ್ತು, ಆರು ಜನರಿಗೆ ಗಾಯ
ಹಾವೇರಿ: ಹುಕ್ಕೇರಿ ಮಠದ ಜಾತ್ರೆಗೆ ಬರುತ್ತಿದ್ದ ಚಕ್ಕಡಿಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿ ರಸ್ತೆಬದಿ ಗುಂಡಿಗೆ ಬಿದ್ದು ಆರು ಜನ ಹಾಗೂ ಒಂದು ಎತ್ತು ಗಾಯಗೊಂಡ ಘಟನೆ ಹಾವೇರಿ ನಗರದ ಹಾನಗಲ್ಲ ರಸ್ತೆ ಶ್ರೀಕಂಠಪ್ಪ ಬಡಾವಣೆ ಮಂಗಳವಾರ ರಾತ್ರಿ ಬಳಿ ಸಂಭವಿಸಿದೆ.
ಆಲದಕಟ್ಟಿ ಗ್ರಾಮದ ರುದ್ರಮುನಿ ಚಿನ್ನಿಕಟ್ಟಿ, ಆಕಾಶ ಹಾವಣಗಿ, ಸಂಗನಗೌಡ ಗೌಡಪ್ಪನವರ, ಅಕ್ಷಯ ಕುಂದೂರ, ಅಮಿತ ಕುಂದೂರ, ಕರಬಸಪ್ಪ ಸೂಲಿ ಗಾಯಗೊಂಡವರು.
ರುದ್ರಮುನಿ ಚಿನ್ನಿಕಟ್ಟಿ ಹಾಗೂ ಇತರರು ಟೈರ್ ಗಾಡಿಯ ಚಕ್ಕಡಿ ಹತ್ತಿಕೊಂಡು ಆಲದಕಟ್ಟಿಯಿಂದ ಹಾವೇರಿಯ ಹುಕ್ಕೇರಿ ಮಠದ ಜಾತ್ರೆಗೆ ಆಗಮಿಸುತ್ತಿದ್ದರು. ಇದೇ ವೇಳೆ ಲಾರಿಯೊಂದು ಸಂಗೂರ ಸಕ್ಕರ ಕಾರ್ಖಾನೆಗೆ ಕಬ್ಬು ಇಳಿಸಿ ಹಾವೇರಿಯತ್ತ ಬರುತ್ತಿತ್ತು. ಎದುರಿಗೆ ಹೊರಟಿದ್ದ ಚಕ್ಕಡಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿಚಾಲಕ ಹಾವೇರಿ ವಿಜಯನಗರದ ಭರಮಪ್ಪ ಶಿರಗುಪ್ಪಿ ನಿರ್ಲಕ್ಷೃದಿಂದ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಹಾಗೂ ಎತ್ತು ಒಂದನ್ನು ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಚಾರ ಠಾಣೆಯ ಪಿಎಸ್‌ಐ ಶೈಲಶ್ರೀ ಎಸ್. ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net