ಹಾಗಾಗಿ, ಇಂತಹ ಕೇಸ್‌ಗಳನ್ನು ಮುಂದಕ್ಕೆ ತಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನಿಸಿದ ಮಕ್ಕಳ ಹೆಸರು ತಿದ್ದುಪಡಿಗಾಗಿ ಪಾಲಕರು, ಮಕ್ಕಳು ಆಧಾರ್ ಕೇಂದ್ರಗಳಿಗೆ ನಿತ್ಯವೂ ಅಲೆಯುವಂತಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಅಂಚೆ ಕಚೇರಿ, ಬ್ಯಾಂಕುಗಳು ಅಲೆದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಆಧಾರ್ ಆಪರೇಟರ್‌ಗಳು ಡಿಜಿಟಲ್ ಜನನ ಪ್ರಮಾಣ ಪತ್ರ ತನ್ನಿ ಎನ್ನುತ್ತಾರೆ. ಬೆಂಗಳೂರು ಖನಿಜ ಭವನಕ್ಕೆ ಹೋಗಿ, ದಾವಣೆಗೆರೆ, ಹುಬ್ಬಳ್ಳಿಯ ಆಧಾರ್ ಕೇಂದ್ರಕ್ಕೆ ಹೋಗಿ ಎಂದು ಅಲೆದಾಡಿಸುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಮಕ್ಕಳ ಪಾಲಕರು ಆಧಾರ್ ತಿದ್ದುಪಡಿ ಮಾಡಿಸುವುದು ಹೇಗೆ ಮತ್ತು ಎಲ್ಲಿ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಯುಐಡಿಎಐ (ಯುನಿಕ್ ಐಡೆಂಟಿಫೇಕಶನ್ ಅಥಾರಿಟಿ ಆಫ್ ಇಂಡಿಯಾ) ಜತೆ ಸಮಾಲೋಚನೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕಿದೆ. ಬಾಕ್ಸ್ ನೋಂದಣಾಧಿಕಾರಿಗಳ ಪತ್ರಕ್ಕಿಲ್ಲ ಕಿಮ್ಮತ್ತು ?