ಹಾರ್ವೇಸ್ಟರ್ ಮಷಿನ್ ಬಡಿದು 6 ವರ್ಷದ ಬಾಲಕ ದುರ್ಮರಣ

Crime
Crime
Published on

ಹಿರೇಕೆರೂರ: ಸೂರ್ಯಕಾಂತಿ ತೆನೆ ಕೊಯ್ಯುತ್ತಿದ್ದ ಹಾರ್ವೇಸ್ಟರ್ ಮಷಿನ್ ಬಡಿದು 6 ವರ್ಷದ ಬಾಲಕ ಮೃತಪಟ್ಟ ಘಟನೆ ತಾಲೂಕಿನ ದೀವಗಿಹಳ್ಳಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದ ಕೆಂಚಪ್ಪ ಸಿದ್ದಪ್ಪ ಪೂಜಾರ (6) ಮೃತ ಬಾಲಕ.

ಈತ ಜಮೀನಿನಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಸೂರ್ಯಕಾಂತಿ ತೆನೆ ಕೊಯ್ಯುತ್ತಿದ್ದ ಹಾರ್ವೇಸ್ಟರ್ ಮಷಿನ್ ತಲೆಗೆ ಬಡಿದು ಮೃತಪಟ್ಟಿದ್ದಾನೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net