

ರಾಣೆಬೆನ್ನೂರು: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ಇಟಗಿ ಗ್ರಾಮದ ಬಳಿ ಹರಿಹರ&ಸಮ್ಮಸಗಿ ಹೆದ್ಧಾರಿಯ ಸೇತುವೆ ಕುಸಿದು ಬಿದ್ದಿದ್ದು ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹೆದ್ಧಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರೈತ ಸಂದ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮಾತನಾಡಿ, ತಾಲೂಕಿನ ಹರಿಹರ-&ಸಮ್ಮಸಗಿ ರಸ್ತೆ ಇಟಗಿ ಬಳಿ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು ಸೇತುವೆಗೆ ದಕ್ಕೆಯಾಗಿದೆ. ಈ ಅವಘಡಕ್ಕೆ ರಸ್ತೆ ನಿಮಾರ್ಣದ ಕಳಪೆ ಕಾಮಗಾರಿಯೇ ಮುಖ್ಯ ಕಾರಣವಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಕುಟುಂತ ನಡೆದ ಕಳೆಪೆ ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡಿಲ್ಲ. ಇದರಿಂದ ಸೇತುವೆ ಕೊಚ್ಚಿ ಹೋಗಿ ಸಾರ್ವಜನಿಕರು ಈ ರಸ್ತೆ ಮಾರ್ಗವಾಗಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಆದ್ದರಿಂದ ಕೂಡಲೇ ರಸ್ತೆ ಕಾಮಗಾರಿ ನಡೆಸಿ ಕುಸಿದು ಹೋಗಿರುವ ಸೇತುವೆ ಕಾಮಗಾರಿ ಪುನಃ ಮಾಡಬೇಕು. ಹಾಳಾಗಿರುವ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಇಇ ಜಗದೀಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಹರಿಹರಗೌಡ ಪಾಟೀಲ, ನಾಗನಗೌಡ ಮಾಗನೂರ, ಜಮಾಲಸಬಾ ಸೇತಸನದಿ, ಪ್ರಭು ನಾಯಕ, ಗಣೇಶ ಎರೇಸಿಮಿ, ಹಾಲೇಶ ಕೆಂಚನಾಯ್ಕ, ಹಾಲೇಶ ತಳವಾರ ಮತ್ತಿತರರು ಉಪಸ್ಥಿತರಿದ್ದರು.