

ಹಾವೇರಿ: ಸಿಮೆಂಟ್ ಮತ್ತು ಕಲ್ಲಿನ ಪುಡಿ ಮಿಕ್ಸ್ ಮಾಡುವ ಯಂತ್ರಕ್ಕೆ ಕೈಯಲ್ಲಿರುವ ಕಗಡ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಹಾನಗಲ್ಲ ತಾಲೂಕಿನ ಹಾವಣಗಿ ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ಮೆಹಬೂಬನಗರದ ನಿವಾಸಿ ಮನ್ಸೂರಹ್ಮದ್ ಅಜೀಜಸಾಬ ಶ್ಯಾಡಗುಪ್ಪಿ (45) ಮೃತ ವ್ಯಕ್ತಿ.
ಈತ ಸಿಮೆಂಟ್ ಹಾಗೂ ಕಲ್ಲಿನ ಪುಡಿ ಮಿಕ್ಸ್ ಮಾಡುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕೈಯಲ್ಲಿದ್ದ ಕಡಗ ಮಷಿನ್ನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.