ಹಕ್ಕುಪತ್ರ ವಿತರಣೆಗೆ ಹಳ್ಳೂರು ಗ್ರಾಮಸ್ಥರ ಮನವಿ-title deeds

ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮಸ್ಥರು ಹಕ್ಕಪತ್ರ (title deeds) ನೀಡುವಂತೆ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಿದರು. ರವೀಂದ್ರ ಮಲೆಬೆನ್ನೂರು, ಶೌಕತಅಲಿ ಮುಲ್ಲಾ, ರಂಗಪ್ಪ ಕಲ್ಲಹಳ್ಳಿ, ಬಸ್ಪಪ್ಪ ಬಲಮೂರಿ ಇತರರು ಇದ್ದರು.
ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮಸ್ಥರು ಹಕ್ಕಪತ್ರ (title deeds) ನೀಡುವಂತೆ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಿದರು. ರವೀಂದ್ರ ಮಲೆಬೆನ್ನೂರು, ಶೌಕತಅಲಿ ಮುಲ್ಲಾ, ರಂಗಪ್ಪ ಕಲ್ಲಹಳ್ಳಿ, ಬಸ್ಪಪ್ಪ ಬಲಮೂರಿ ಇತರರು ಇದ್ದರು.
Published on
ರಟ್ಟಿಹಳ್ಳಿ: ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿರುವವರಿಗೆ ಹಕ್ಕುಪತ್ರ (title deeds) ನೀಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದಲ್ಲಿ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಗ್ರಾಮಸ್ಥ ರವೀಂದ್ರ ಮಲೇಬೆನ್ನೂರು ಮಾತನಾಡಿ, ಹಳ್ಳೂರು ಗ್ರಾಮದ ಸರ್ವೆ ನಂ. 98/ಬನಲ್ಲಿ ಕಳೆದ 40 ವರ್ಷಗಳಿಂದ ಸುಮಾರು 30 ಕುಟುಂಬ ವಾಸವಾಗಿವೆ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಈ ಕುಟುಂಬಗಳಿಗೆ ಅನುದಾನ ಮಂಜೂರಾಗಿ ಮನೆಗಳು ನಿರ್ವಣವಾಗಿವೆ. ವಿದ್ಯುತ್, ಶೌಚಗೃಹ ಮತ್ತು ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸೌಕರ್ಯ ಒದಗಿಸಲಾಗಿದೆ. ಕುಟುಂಬಗಳು ಗ್ರಾಪಂಗೆ ಕರ ಪಾವತಿಸುತ್ತಿವೆ. ಸರ್ಕಾರದ ಆದೇಶದಂತೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿರುವ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ನೀಡಬೇಕು. ಕಳೆದ 15-20 ವರ್ಷಳಿಂದ ಮನೆಗಳನ್ನು ಕಟ್ಟಿಸಿಕೊಂಡ ಅನೇಕರಿಗೆ ಹಕ್ಕುಪತ್ರ ನೀಡಲಾಗಿದೆ. ಈಗಾಗಲೇ ಸೆಪ್ಟಂಬರ್​ನಲ್ಲಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ತಾಲೂಕು ಆಡಳಿತ ಸ್ಪಂದನೆ ಮಾಡಬೇಕು ಎಂದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಶ್ವೇತಾ ಅಮರಾವತಿ, ಶೀಘ್ರವಾಗಿ ಪರಿಶೀಲಿಸಿ ಹಕ್ಕಪತ್ರ ನೀಡಲಾಗುವುದು ಎಂದು ಹೇಳಿದರು.
ಗ್ರಾಮಸ್ಥರಾದ ಶೌಕತಅಲಿ ಮುಲ್ಲಾ, ರಂಗಪ್ಪ ಕಲ್ಲಹಳ್ಳಿ, ಬಸ್ಪಪ್ಪ ಬಲಮೂರಿ, ಸುರೇಶ ಓಲೇಕಾರ, ರಾಘವೇಂದ್ರ ಬಳಿಗಾರ, ರಾಜೇಶ ಮೂಲಿಮನಿ, ಗಣೇಶ ಸಿದ್ದೋಜಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net