oilseeds ಎಣ್ಣೆಕಾಳು ಬೆಳೆದರೆ ಆರ್ಥಿಕ ಅನುಕೂಲ

ಬ್ಯಾಡಗಿ ತಾಲೂಕಿನ ಬುಡುಪನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಖಾದ್ಯ ಅಭಿಯಾನ-ಎಣ್ಣೆ ಕಾಳು (oilseeds)ಯೋಜನೆಯಡಿ ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಯ ರೈತರಿಗೆ ತರಬೇತಿ ಕಾರ್ಯಕ್ರಮ ಜರುಗಿತು.
ಬ್ಯಾಡಗಿ ತಾಲೂಕಿನ ಬುಡುಪನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಖಾದ್ಯ ಅಭಿಯಾನ-ಎಣ್ಣೆ ಕಾಳು (oilseeds)ಯೋಜನೆಯಡಿ ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಯ ರೈತರಿಗೆ ತರಬೇತಿ ಕಾರ್ಯಕ್ರಮ ಜರುಗಿತು.
Published on
ಬ್ಯಾಡಗಿ: ಕಡಿಮೆ ತೇವಾಂಶ ಇರುವ ಬರಡು ಭೂಮಿಗಳಲ್ಲಿ ಎಣ್ಣೆಕಾಳುಗಳ oilseeds ಬೆಳೆದರೆ ರೈತರು ಆರ್ಥಿಕವಾಗಿ ಅನುಕೂಲವಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಹೇಳಿದರು.
ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆ ಕಾಳು ಯೋಜನೆಯಡಿ ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಗಾರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಲ್ಲಿ ಎಣ್ಣೆ ಕಾಳು ಯೋಜನೆಯನ್ನು 2024-25ರಿಂದ 2030-31ರವರೆಗೆ ಅನುಷ್ಠಾನ ಮಾಡಲಾಗುತ್ತಿದೆ.
ಖಾದ್ಯ ತೈಲಗಳ ಆಮದು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳು ಬೆಳೆಗಳ ಕ್ಷೇತ್ರ ವಿಸ್ತರಣೆ, ಉತ್ಪಾದನೆ ಹೆಚ್ಚಿಸಲು ಹಾಗೂ ರೈತರ ಆದಾಯ ಸುಧಾರಿಸಲು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಯೋಜನೆ ಜಾರಿಗೊಳಿಸಿದೆ ಹಮ್ಮಿಕೊಳ್ಳಲಾಗಿದೆ ಎಂದರು.
ಹತ್ತಾರು ವರ್ಷಗಳ ಹಿಂದೆ ರೈತರು ಅಕ್ಕಡಿ ಸಾಲು ಪದ್ಧತಿಯಡಿ ಎಣ್ಣೆ ಕಾಳು ಬೆಳೆಯುತ್ತಿದ್ದರು. ಇದರಿಂದ ಆ ಕುಟುಂಬಗಳಿಗೆ ಖಾದ್ಯ ತೈಲ ಹಾಗೂ ಶೂನ್ಯ ಖರ್ಚಿನಲ್ಲಿ ಲಾಭ ದೊರೆಯುತ್ತಿತ್ತು.
ಕರೆ ಎಳ್ಳು, ಗುರೆಳ್ಳು, ಕುಸುಬಿ, ಸೂರ್ಯಕಾಂತಿ, ಶೇಂಗಾ, ಔಡಲ ಸೇರಿದಂತೆ ಹಲವು ಎಣ್ಣೆ ಉತ್ಪಾದನೆಯಲ್ಲಿ ಬಳಸುವ ಕಾಳು ಬೆಳೆಯಲು ಹಿಂದೇಟು ಹಾಕುತ್ತಿರುವ ಪರಿಣಾಮ ಸರ್ಕಾರ ರೈತರಿಗೆ ಬೀಜ ವಿತರಿಸಿ ಬೆಳೆ ಬೆಳೆಯುವಂತೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕಾಗಿನೆಲೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಸದಸ್ಯ ಶಂಕರಗೌಡ ಪಾಟೀಲ, ವಿಜ್ಞಾನಿಗಳಾದ ಕಿರಣ್ ಎಂ., ಕೃಷ್ಣ ನಾಯಕ, ಮಾರುತಿ ಖುರ್ಧುಕೋಡಿಹಳ್ಳಿ, ನಿತೀಶ ಬೇವಿನಕಟ್ಟಿ, ಮಾಲತೇಶ ಬುಡಪನಹಳ್ಳಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net