ಅರ್ಧ ಬೆಲೆಗೆ ಚಿನ್ನ ಕೊಡುವ ನೆಪದಲ್ಲಿ 15 ಲಕ್ಷ ರೂ. ವಂಚನೆ

Crime
Crime
Published on

ಬ್ಯಾಡಗಿ: ಅರ್ಧ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ಬೆಳಗಾವಿಯ ವ್ಯಕ್ತಿಯೊಬ್ಬರಿಗೆ 15 ಲಕ್ಷ ರೂ. ವಂಚಿಸಿರುವ ಘಟನೆ ತಾಲೂಕಿನ ಅತ್ತಿಗೇರಿ ಗ್ರಾಮದ ಬಳಿ ನಡೆದಿದೆ.

ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಕರೆಪ್ಪ ಮುಶೇಪ್ಪ ತಿಳ್ಳಿ (54) ಎಂಬುವರಿಗೆ ಮೋಸ ಮಾಡಿರುವುದು. ಇವರಿಗೆ ಸೋಮಲಿಂಗಪ್ಪ ಹಾಗೂ ಓರ್ವ ಮಹಿಳೆ ನಾಲ್ಕೆೈದು ಜನರ ತಂಡ ವಂಚನೆ ಮಾಡಿದೆ.

ಕರೆಪ್ಪ ಅವರು ಧರ್ಮಸ್ಥಳಕ್ಕೆ ಹೋದಾಗ ಸೋಮಲಿಂಗಪ್ಪ ಅವರನ್ನು ಪರಿಚಯ ಮಾಡಿಕೊಂಡು ಫೋನ್ ನಂಬರ್ ಪಡೆದುಕೊಂಡಿದ್ದ. ಇದಾದ 15 ದಿನದ ಬಳಿಕ ಫೋನ್ ಮಾಡಿದ ಸೋಮಲಿಂಗಪ್ಪ ನಮ್ಮ ಮನೆ ಕೆಡವುತ್ತಿರುವಾಗ ಚಿನ್ನ ದೊರೆತಿದೆ. ಅದನ್ನು ನಿಮಗೆ ಅರ್ಧ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಕರೆಪ್ಪ 15 ಲಕ್ಷ ರೂ. ಹಣ ತೆಗೆದುಕೊಂಡು ಅತ್ತಿಗೇರಿ ಬಳಿ ಬಂದಾಗ ಹಣ ಹಾಗೂ ಮೊಬೈಲ್ಅನ್ನು ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net