ಚಿನ್ನದ ನಾಣ್ಯ ಕೊಡುವುದಾಗಿ 6 ಲಕ್ಷ ರೂ. ವಂಚಿಸಿದ ಗ್ಯಾಂಗ್

Crime
Crime
Published on

ರಾಣೆಬೆನ್ನೂರು: ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ಬೆಂಗಳೂರಿನ ಉದ್ಯಮಿಯೊಬ್ಬರಿಗೆ 6 ಲಕ್ಷ ರೂ. ವಂಚಿಸಿದ ಘಟನೆ ತಾಲೂಕಿನ ಕವಲೆತ್ತು ಗ್ರಾಮದಲ್ಲಿ ನಡೆದಿದೆ.

ಎಚ್.ಎನ್. ಗುರುಮೂತಿರ್ (34) ಎಂಬುವರಿಗೆ ವಂಚಿಸಿರುವುದು. ಬಾಗಲಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದ ಕುಮಾರ ಹಾಗೂ 5 ಜನ ವಂಚಿಸಿದವರು.

ಆರೋಪಿ ಕುಮಾರ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಗುರುಮೂತಿರ್ ಅವರ ಅಂಗಡಿಗೆ ಹಣ್ಣು-ತರಕಾರಿ ಮಾರಾಟ ಮಾಡುತ್ತಿದ್ದ. ನಂತರ ಕೆಲಸ ಬಿಟ್ಟು ತನ್ನೂರಿಗೆ ಬಂದು ಉಳಿದುಕೊಂಡಿದ್ದ. 15 ದಿನದ ಹಿಂದೆ ಗುರುಮೂತಿರ್ಗೆ ಫೋನ್ ಮಾಡಿ ನಮ್ಮ ಮನೆಯಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ. ಕೆಲವೊಂದಿಷ್ಟು ನಾವು ಆಭರಣ ಮಾಡಿಸಿಕೊಂಡಿದ್ದೇನೆ. ಉಳಿದವುಗಳನ್ನು ನಿಮಗೆ ಕೊಡುತ್ತೇನೆ. ಅದಕ್ಕೆ 6 ಲಕ್ಷ ರೂ. ಕೊಡಬೇಕು ಎಂದು ಹೇಳಿದ್ದ. ಅದರಂತೆ ಗುರುಮೂತಿರ್ 6 ಲಕ್ಷ ರೂ. ತೆಗೆದುಕೊಂಡು ಬಂದಿದ್ದು ಆತನನ್ನು ಕವಲೆತ್ತು ಗ್ರಾಮದ ಬಳಿ ಕರೆಯಿಸಿಕೊಂಡ ಕುಮಾರ ಹಾಗೂ ಆತನ ಸ್ನೇಹಿತರು ಹಣ ತೆಗೆದುಕೊಂಡು ಚಿನ್ನದ ನಾಣ್ಯ ಕೊಡದೆ ವಂಚಿಸಿ ಕಳುಹಿಸಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net