ಜಿ.ಎಂ. ಶುಗರ್ಸ್ ಗೆ 2.45 ಕೋಟಿ ರೂ. ವಂಚನೆ

Crime
Crime
Published on

ರಟ್ಟಿಹಳ್ಳಿ: ಕಬ್ಬು ಕಟಾವು ಮಾಡುವ ಹಾಗೂ ಸಾಗಾಣಿಕೆ ಮಾಡುವುದಾಗಿ ನಂಬಿಸಿ ಇಲ್ಲಿಯ ಜಿ.ಎಂ. ಶುಗರ್ಸ್ ಕಂಪನಿಗೆ ಬರೋಬ್ಬರಿ 2.45 ಕೋಟಿ ರೂ. ವಂಚಿಸಿರುವ ಕುರಿತು ಇಲ್ಲಿಯ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಸಂತೋಷ ಧೊಂಡಿರಾಮ್ ರಾಥೋಡ್ ಸೇರಿ 22 ಜನರ ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.

ಇವರ ವಿರುದ್ಧ ಜಿ.ಎಂ. ಶುಗರ್ಸ್ನ ಜನರಲ್ ಮ್ಯಾನೇಜರ್ ರಾಜಶೇಖರ ಎಂಬುವರು ದೂರು ದಾಖಲಿಸಿದ್ದಾರೆ. ಆರೋಪಿತರು ಕಬ್ಬು ಕಟಾವು ಮತ್ತು ಸಾಗಾಟ ಮಾಡಲು ಕಾಮಿರ್ಕರು ಕರೆದುಕೊಂಡು ಬರುವುದಾಗಿ ಹೇಳಿ ಕಂಪನಿಯವರಿಂದ 2.45 ಕೋಟಿ ರೂ. ತೆಗೆದುಕೊಂಡು ಕೆಲಸಕ್ಕೆ ಬಾರದೆ ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net