ಗ್ಯಾಸ್ ವಂಚಕರ ವಿರುದ್ಧ ಕ್ರಮ ಕೈಗೊಳ್ಳಿ

ಪ್ರತಿಭಟನೆ
ಪ್ರತಿಭಟನೆ
Published on

ರಾಣೆಬೆನ್ನೂರ: ಆಟೋರಿಾಗಳಿಗೆ ತುಂಬಿಸುವ ಎಲ್ಪಿಜಿ ಗ್ಯಾಸ್ ಬಂಕ್ಗಳ ಮಾಲೀಕರು ಏಕಾಏಕಿ ಬೆಲೆ ಏರಿಕೆ ಮಾಡಿ ಆಟೋರಿಾದವರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಆಟೋರಿಾ ಚಾಲಕರು ಮತ್ತು ಮಾಲೀಕರು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಆಟೋರಿಾ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿ ಬಸ್ ನಿಲ್ದಾಣದ ವೃತ್ತಕ್ಕೆ ಬಂದು ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಗ್ಯಾಸ್ ಬೆಲೆ ಹೆಚ್ಚಳ ಮಾಡಿರುವ ಬಂಕ್ಗಳ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ್ದ ರೈತ ಸಂದ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ, ಗ್ಯಾಸ್ ಬಂಕ್ನವರು ಸಂಗ್ರಹವಿದ್ದರೂ ಗ್ಯಾಸ್ ಇಲ್ಲವೆಂದು ಹೇಳಿ ಆಟೋದವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದಾದ ಎರಡು ದಿನದಲ್ಲಿ 82 ರೂ.ಗೆ ಕೆ.ಜಿ. ಇರುವ ಗ್ಯಾಸ್ಅನ್ನು 102 ರೂ.ಗೆ ಏರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ನಗರದಲ್ಲಿ 500ಕ್ಕೂ ಅಧಿಕ ಆಟೋರಿಾಗಳು ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಬಂಕ್ನವರ ಕಣ್ಣಾಮುಚ್ಚಾಲೇ ಆಟದಿಂದ ಎಲ್ಲರೂ ಬೇಸತ್ತು ಹೋಗಿದ್ದಾರೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಆದ್ದರಿಂದ ವಿನಾಕಾರಣ ಬೆಲೆಯಲ್ಲಿ ತಾರತಮ್ಯ ಮಾಡುತ್ತಿರುವ ಮತ್ತು ಗ್ಯಾಸ್ನ ಅಭಾವ ಸೃಷ್ಟಿಸುತ್ತಿರುವ ಗ್ಯಾಸ್ ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರಮುಖರಾದ ನಿತ್ಯಾನಂದ ಕುಂದಾಪುರ, ಉದಯ ತೆಗ್ಗಿನ, ರಮೇಶ ಕೆಂಪಣ್ಣನವರ, ಮಂಜಪ್ಪ ಗಳಗನಾಥ, ನಾಗರಾಜ ಹಾರೋಗೊಪ್ಪ, ವಿಜಯ ಚನ್ನಪ್ಪನವರ, ರಾಜು ರಾವಳ, ಪರಶುರಾಮ ಅಯ್ಯಜ್ಜನವರ, ಮಾಲತೇಶ ವಡ್ಡರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net