ಮಹಾತ್ಮಗಾಂಧಿ ಮೂರ್ತಿ ಭಗ್ನಗೊಳಿಸಿದ ಕಿಡಗೇಡಿಗಳು

ಮೂರ್ತಿ ಭಗ್ನ
ಮೂರ್ತಿ ಭಗ್ನ
Published on

ಹಾವೇರಿ: ಬಸವ ಜಯಂತಿ ದಿನದಂದು ಕಿಡಗೇಡಿಗಳು ಮಹಾತ್ಮ ಗಾಂಧೀಜಿ ಮೂತಿರ್ ಭಗ್ನಗೊಳಿಸಿರುವ ಟನೆ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಸೋಮವಾರ ಬೆಳಕಿನ ಜಾವ ಬೆಳಕಿಗೆ ಬಂದಿದೆ.

ನಗರದ ಮಹಾತ್ಮ ಗಾಂಧೀಜಿ ರಸ್ತೆಯ ಆರಂಭದ ವೃತ್ತದಲ್ಲಿ ಹಲವು ವರ್ಷಗಳ ಹಿಂದೆ 2 ಎರಡು ಎತ್ತರದ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ರಾತ್ರಿ ಸಮಯದಲ್ಲಿ ಯಾರೋ ಕಿಡಗೇಡಿಗಳು ಗಾಂಧೀಜಿ ಪ್ರತಿಮೆಯನ್ನು ವಿರೂಪಗೊಳಿಸಿ ಭಗ್ನಗೊಳಿಸಿದ್ದಾರೆ. ಬೆಳಗಿನ ಜಾವ ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಬಂದಾಗ ಗಾಂಧೀಜಿ ಮೂತಿರ್ ಭಗ್ನಗೊಂಡಿರುವುದು ಕಂಡು ಬಂದಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟನಾ ಸ್ಥಳಕ್ಕೆ ಎಸ್ಪಿ ಯಶೋಧಾ ವಂಟಗೋಡಿ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದರು. ಮಹಾತ್ಮಗಾಂಧೀಜಿ ವೃತ್ತದ ಸುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಭಗ್ನಗೊಂಡ ಮೂತಿರ್ಯನ್ನು ನಗರಸಭೆ ಕಚೇರಿಯಲ್ಲಿ ಇಡಲಾಗಿದೆ.

ಆದರೆ, ಮೂತಿರ್ ಭಗ್ನಗೊಳಿಸಿರುವ ಆರೋಪಿತರ ಕುರಿತು ಸದ್ಯ ಯಾವುದೆ ಮಾಹಿತಿ ಲಭ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮಾನಸಿಕ ಅಸ್ವಸ್ಥನಿಂದ ಕೃತ್ಯ...

ಗಾಂಧೀಜಿ ಮೂತಿರ್ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೊಂಡ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ವೈಭವ ವಿನೋದ ರಾಯ್ಕರ (28) ಎಂಬುವನನ್ನು ಬಂಧಿಸಿದ್ದಾರೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಮಾನಸಿಕ ಅಸ್ವಸ್ಥ ಎಂಬುದು ತಿಳಿದು ಬಂದಿದೆ. ಆದ್ದರಿಂದ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net