ಫ್ರೀಯಾಗಿ ಚಿಕನ್ ಬಿರಿಯಾನಿ ಹಂಚಿಕೆ; ಎಲ್ಲಿ, ಯಾವಾಗ? ನೋಡಿ ಇಲ್ಲಿದೆ ಮಾಹಿತಿ

ಚಿಕನ್ ಬಿರಿಯಾನಿ
ಚಿಕನ್ ಬಿರಿಯಾನಿ
Published on

ರಾಣೆಬೆನ್ನೂರ: ಚಿಕನ್ ಬಿರಿಯಾನಿ ಅಂದ್ರೆ ಸಾಕು ಜನರು ಬಾಯಿ ಚಪ್ಪರಿಸುತ್ತಾರೆ ಅಂತಹದರಲ್ಲಿ ಇದೀಗ ಉಚಿತ ಬಿರಿಯಾನಿ ನೀಡಲು ಸಿದ್ದರಾಮಯ್ಯ ಅಭಿಮಾನಿಗಳು ರಾಣೆಬೆನ್ನೂರ ನಗರದಲ್ಲಿ ಸಜ್ಜಾಗಿದ್ದು ಇದೀಗ ಜನರು ಕಾತುರದಿಂದ ಕಾಯುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ರಾಜ್ಯದ ಇತಿಹಾಸದಲ್ಲಿ ಅಧಿಕ ದಿನಗಳ ಕಾಲ(7ವರ್ಷ 239 ದಿನಗಳ) ಕಾಲ ಮುಖ್ಯಮಂತ್ರಿ ಆದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಅಹಿಂದ ಸಮಾಜದ ವತಿಯಿಂದ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ.

ನಗರದ ಬಸ್ ನಿಲ್ದಾಣ ಮುಂದೆ ಜ. 6ರಂದು ಮಧ್ಯಾಹ್ನ 12ಕ್ಕೆ ಎರಡು ಕ್ವಿಂಟಲ್ ಚಿಕನ್ ಬಿರಿಯಾನಿ ನೀಡಲು ಅವರ ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಹಿನ್ನಲೆ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಅಹಿಂದ ಅಧ್ಯಕ್ಷ ರತ್ನಾಕರ್ ಕುಂದಾಪುರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net