FISH ಮರೆಲ್ ಮೀನು ಕೃಷಿ 10 ಲಕ್ಷ ರೂ. ಆದಾಯ

FISH ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದ ಯುವ ರೈತ ಯಾಸೀನ್ ಅಬ್ದುಲ್‌ಸಾಬ್ ಮುಜಾವರ ಎಂಬುವವರು ಮರೆಲ್ ಮೀನು ಕೃಷಿ ಮಾಡಲಾಗುತ್ತಿದೆ.
FISH ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದ ಯುವ ರೈತ ಯಾಸೀನ್ ಅಬ್ದುಲ್‌ಸಾಬ್ ಮುಜಾವರ ಎಂಬುವವರು ಮರೆಲ್ ಮೀನು ಕೃಷಿ ಮಾಡಲಾಗುತ್ತಿದೆ.
Published on

ವಿರೂಪಾಕ್ಷಯ್ಯಗುದ್ನಯ್ಯನವರಮಠ ಹುಬ್ಬಳ್ಳಿ

ಹಾವೇರಿತಾಲೂಕಿನ ಕಂಚಾರಗಟ್ಟಿ ಗ್ರಾಮದಯುವ ರೈತ ಯಾಸೀನ್ ಅಬ್ದುಲ್‌ಸಾಬ್ಮುಜಾವರ ಎಂಬುವವರು ಮರೆಲ್ ಮೀನು(ಸ್ನೇಕ್ಹೆಡ್)ಕೃಷಿಯಲ್ಲಿಮೊದಲ ಯತ್ನದಲ್ಲೇ ಅದ್ಭುತ ಯಶಸ್ಸುಸಾಧಿಸಿದ್ದಾರೆ.

ಕಳೆದ10ವರ್ಷಗಳಿಂದರೇಷ್ಮೆ ಸಾಕಣೆ ಮಾಡುತ್ತಿರುವಇವರು ಇದರ ಜತೆಗೆ ಇನ್ನೊಂದು ಕೃಷಿಮಾಡಬೇಕು ಎಂದು ಯೋಚಿಸಿದಾಗಹೊಳೆದದ್ದೇ ಮೀನು ಕೃಷಿ.ತಕ್ಷಣಮೀನು ಕೃಷಿ ಮಾಡುವ ರೈತರ ಹತ್ತಾರುಘಟಕಗಳಿಗೆ ಭೇಟಿ ನೀಡಿ ಮಾಹಿತಿಸಂಗ್ರಹಿಸಿದರು.

ಬಳಿಕಹಾವೇರಿ ಜಿಲ್ಲೆಯ ಮೀನುಗಾರಿಕೆಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ,ಅವರಿಂದಮಾರ್ಗದರ್ಶನ ಮತ್ತು ಮೀನು ಕೃಷಿಗೆಸಿಗುವ ಸಹಾಯಧನದ ಮಾಹಿತಿ ಪಡೆದರು.2024ರಫೆಬ್ರವರಿಯಲ್ಲಿ ಮೀನು ಕೃಷಿಗೆಬೇಕಾದ ಎರಡು ನೀರಿನ ಹೊಂಡ (80ಅಡಿಅಗಲ,180 ಅಡಿಉದ್ದ,12 ಅಡಿಆಳ)ನಿರ್ಮಿಸಿದರು.

2024ರಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಿಂದ13ಸಾವಿರಮರೆಲ್ ಮೀನು ಮರಿಗಳನ್ನು 15ರೂ.ಗೆಒಂದರಂತೆ ಒಟ್ಟು 1.95ಲಕ್ಷರೂ.ನೀಡಿಖರೀದಿಸಿ ತಂದರು.2025ರಜೂನ್‌ವರೆಗೆ 9ತಿಂಗಳುಅವುಗಳಿಗೆ 9ಟನ್ಆಹಾರ ನೀಡಿ ಬೆಳೆಸಿದರು.

ಜೂನ್‌ನಲ್ಲಿಮಾರಾಟ: 2025ರಜೂನ್‌ನಲ್ಲಿ ಒಂದೊಂದು ಮೀನು800ರಿಂದ1,000ಗ್ರಾಮ್‌ವರೆಗೆಬೆಳೆದವು.ಬಳಿಕಬೆಂಗಳೂರು,ಹೈದರಾಬಾದ್,ಕೇರಳಮತ್ತಿತರ ಕಡೆಗಳಿಂದ ಬಂದವ್ಯಾಪಾರಸ್ಥರಿಗೆ ಒಟ್ಟು 9ಟನ್ಮೀನುಗಳನ್ನು ಮಾರಾಟ ಮಾಡಲಾಗಿದೆ.

25.20ಲಕ್ಷರೂ.ಮೌಲ್ಯದಮೀನು: ಮೀನುಖರೀದಿಸಿದ ವ್ಯಾಪಾರಸ್ಥರು ಮರೆಲ್ಮೀನು ಪ್ರತಿ ಕೆಜಿಗೆ 280ರೂ.ನಂತೆ9ಟನ್‌ಗೆಒಟ್ಟು 25.20ಲಕ್ಷರೂ.ಪಾವತಿಸಿದರು.ಮೀನುಮರಿ ಖರೀದಿ,ಅವುಗಳನಿರ್ವಹಣೆ,ಔಷಧ,ಫೀಡಿಂಗ್ಎಲ್ಲ ಖರ್ಚು ಸೇರಿ 15ಲಕ್ಷರೂ.ಕಳೆದು10ಲಕ್ಷರೂ.ಆದಾಯವಾಗಿದೆ.

ಎರಡನೇಫಸಲು 14ಟನ್,39.20 ಲಕ್ಷರೂ.ನಿರೀಕ್ಷೆ: 2025ರಜೂನ್‌ನಲ್ಲಿ ಚನ್ನಪಟ್ಟಣದಿಂದ20ಸಾವಿರಮರೆಲ್ ಮೀನು ಮರಿಗಳನ್ನು 3ಲಕ್ಷರೂ.ನೀಡಿಖರೀದಿಸಿ ತಂದು ಬಿಡಲಾಗಿದೆ.ಈಗಅವುಗಳಿಗೆ 5ತಿಂಗಳಾಗಿದ್ದು,2026ರಮಾರ್ಚ್‌ನಲ್ಲಿ ಎರಡನೇ ಇಳುವರಿಅಂದಾಜು 14ಟನ್ಬರಲಿದೆ.ಇದರಿಂದ39.20ಲಕ್ಷರೂ.ಸಿಗುವನಿರೀಕ್ಷೆ ಇದೆ.ನಿರ್ವಹಣೆ,ಫೀಡಿಂಗ್ಸೇರಿದಂತೆ 24ಲಕ್ಷರೂ.ಖರ್ಚುಕಳೆದು ಅಂದಾಜು 15ಲಕ್ಷರೂ.ಆದಾಯಬರಲಿದೆ.

 ಪೋಷಕಾಂಶಯುಕ್ತನೀರು

ಪ್ರತಿದಿನಮೀನುಗಳಿಗೆ ಮೂರು ಹೊತ್ತು ಆಹಾರನೀಡಲಾಗುವುದು.ಹತ್ತುದಿನಗಳಿಗೊಮ್ಮೆ ನೀರು ಬದಲಿಸಲಾಗುವುದು.ಹೊರಗೆತೆಗೆದ ನೀರಿನಲ್ಲಿ ಪೋಷಕಾಂಶಗಳಿದ್ದು,ಬೆಳೆಗಳುಸಮೃದ್ಧವಾಗಿ ಬೆಳೆಯುತ್ತವೆ.ಇದೇನೀರನ್ನು ನಾವು ರೇಷ್ಮೆ ಸಾಕಣೆಗೆಬೇಕಾದ ಹಿಪ್ಪು ನೇರಳೆ ಸೊಪ್ಪುಬೆಳೆಯಲು ಬಳಸುತ್ತಿದ್ದೇವೆ.ಸೊಪ್ಪುಕೂಡ ಚೆನ್ನಾಗಿ ಬೆಳೆಯುತ್ತಿದೆಎನ್ನುತ್ತಾರೆ ಯಾಸೀನ್ ಸಹೋದರಅಬೀದ್ ಮುಜಾವರ.

ಹೊಂಡಕ್ಕೆ10ಲಕ್ಷರೂ.ಖರ್ಚು

ಮೀನುಕೃಷಿ ನಿರ್ಮಾಣಕ್ಕೆ ಎರಡು ಹೊಂಡ(ಪಾಂಡ್)ನಿರ್ಮಾಣಕ್ಕೆ10ಲಕ್ಷರೂ.ಖರ್ಚುಮಾಡಲಾಗಿದೆ.ಮೀನುಗಾರಿಕೆಇಲಾಖೆಯಿಂದ ಒಂದು ಹೊಂಡಕ್ಕೆ 5ಲಕ್ಷರೂ.ಸಹಾಯಧನಬಂದಿದೆ.ಇನ್ನೊಂದುಹೊಂಡಕ್ಕೆ ಮುಂದಿನ ದಿನಗಳಲ್ಲಿಸಹಾಯಧನ ಸಿಗಲಿದೆ ಎನ್ನುತ್ತಾರೆಯಾಸೀನ್ ಸಹೋದರ ಅಹಮ್ಮದ್.

ಪ್ರಶಂಸಾಪತ್ರ

ಮೀನುಕೃಷಿಯಲ್ಲಿ ಅತ್ಯುತ್ತಮ ಸಾಧನೆಮಾಡಿದ್ದಾಕ್ಕಾಗಿ ಮೀನುಗಾರಿಕೆಇಲಾಖೆಯಿಂದ ಬೆಂಗಳೂರಿನಲ್ಲಿಏರ್ಪಡಿಸಿದ್ದ ವಿಶ್ವ ಮೀನುಗಾರಿಕೆದಿನಾಚರಣೆಯಲ್ಲಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರು ಯಾಸೀನ್ಅವರಿಗೆ ಪ್ರಶಂಸಾ ಪತ್ರ ನೀಡಿಗೌರವಿಸಿದ್ದಾರೆ.

ರೇಷ್ಮೆ ಬೆಳೆಯೂ ಸಮೃದ್ಧ

ಯಾಸೀನ್ ಕುಟುಂಬದ್ದು 10 ಎಕರೆ ಜಮೀನಿದ್ದು, ಅದರಲ್ಲಿ 32 ಗುಂಟೆ ಮೀನು ಕೃಷಿಗೆ ಬಳಸಲಾಗುತ್ತಿದೆ. ಉಳಿದ ಜಮೀನಿನಲ್ಲಿ ರೇಷ್ಮೆ, ಕಲ್ಲಂಗಡಿ, ಸೌತೆಕಾಯಿ, ಮತ್ತಿತರ ಬೆಳೆ ಬೆಳೆಯಲಾಗುತ್ತದೆ. ಪ್ರತಿ ವರ್ಷ ರೇಷ್ಮೆ ಬೆಳೆ ಅಂದಾಜು 500 ಕೆಜಿ ಬರುತ್ತಿದ್ದು, 15 ಲಕ್ಷ ರೂ. ಆದಾಯ, ಇತರ ಬೆಳೆಗಳಿಂದ 6 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಹೊಲದಲ್ಲಿ 5 ಬೋರ್‌ವೆಲ್‌ಗಳಿದ್ದು, ಅದೇ ನೀರಿನಿಂದ ಬೇಸಾಯ ಮತ್ತು ಮೀನು ಕೃಷಿ ಮಾಡಲಾಗುತ್ತಿದೆ.

"

ಯುವ ರೈತ ಯಾಸೀನ್ ಮುಜಾವರ ಅವರಿಗೆ ಮರೆಲ್ ಮೀನು ಕೃಷಿ ಮಾಡಲು ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯಡಿ 2024-25ರಲ್ಲಿ 5.64 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ. ನಿರುದ್ಯೋಗಿ ಯುವಕರು ತಮ್ಮ ಹೊಲದಲ್ಲಿ ಸ್ವಂತ ಬಂಡವಾಳ ಹಾಕಿ ಈ ರೀತಿ ಮೀನು ಕೃಷಿ ಮಾಡಿದರೆ ಮೀನುಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುವುದು. ಯುವ ರೈತರು ಇಂಥ ಯೋಜನೆಗಳ ಲಾಭ ಪಡೆದು, ಉತ್ತಮ ಕೃಷಿ ಮಾಡಿ ಆರ್ಥಿಕವಾಗಿ ಸದೃಢರಾಗಲಿ. ವಸಂತ ಹೆಗಡೆ,

 ಮೀನುಗಾರಿಕೆ ಇಲಾಖೆ ಉಪನಿರ್ದೇಶಕ, ಹಾವೇರಿ

"

ಮೀನು ಸಾಕಣೆಯಲ್ಲಿ ಆಸಕ್ತಿ ಇರುವ ಯುವಕರು ಮೀನು ಕೃಷಿ ಮಾಡಲು ಮುಂದೆ ಬರಬೇಕು. ಮೀನುಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬೇರೆ ಕಡೆ ಹಣ ಹೂಡಿಕೆ ಮಾಡುವ ಬದಲು ಸರಿಯಾಗಿ ಮೀನು ಕೃಷಿ ಮಾಡಿದರೆ ಉತ್ತಮ ಲಾಭ ಪಡೆಯಬಹುದು. ಅದಕ್ಕೆ ನಾನೇ ಉದಾಹರಣೆ. ಮುಂದಿನ ವರ್ಷ ಇನ್ನೂ ಎರಡು ಹೊಂಡ ನಿರ್ಮಿಸಿ ಮೀನು ಕೃಷಿ ದ್ವಿಗುಣಗೊಳಿಸುವ ಯೋಜನೆ ಇದೆ. 

ಯಾಸೀನ್ ಮುಜಾವರ, ಮೀನು ಕೃಷಿಕ ಕಂಚಾರಗಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net