ರಸಗೊಬ್ಬರಕ್ಕೆ ಎಫ್ಐಡಿ ಅನ್ವಯ ಬೇಡ; ರೈತರ ಪ್ರತಿಭಟನೆ

ಮನವಿ ಸಲ್ಲಿಕೆ
ಮನವಿ ಸಲ್ಲಿಕೆ
Published on

ರಾಣೆಬೆನ್ನೂರು: ಕೇಂದ್ರ ಸರ್ಕಾರ ಗೊಬ್ಬರಕ್ಕಾಗಿ ರೈತರು ಎಫ್ಐಡಿ ಮಾಡಿದರೆ ಮಾತ್ರ ರಸಗೊಬ್ಬರ ನೀಡಲಾಗುವುದು ಎಂಬ ಆದೇಶ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ರೈತರನ್ನು ದಿಕ್ಕು ದಾರಿ ತಪ್ಪಿಸುವಂತಹ ವ್ಯವಸ್ಥೆ ಮಾಡಿದೆ. ಎ್ಐಡಿ ವ್ಯವಸ್ಥೆ ಮಾಡಿರುವುದು ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಈಗಾಗಲೇ ರೈತರು ಮುಂಗಾರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿ ಬಿತ್ತನೆಯ ತಯಾರಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಎಫ್.ಐ.ಡಿ. ಮಾಡಿಸಿ ಎಂದು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ.

ಒಂದು ಕಡೆಗೆ ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಲು ರೈತರನ್ನು ದಿಕ್ಕುದಾರಿ ತಪ್ಪಿಸುವಂತಹ ವ್ಯವಸ್ಥೆ ಆದಂತಾಗುತ್ತದೆ. ಕೂಡಲೇ ಇದನ್ನು ಈ ಮುಂಗಾರು ಬಿತ್ತನೆಗೆ ಕೈಬಿಟ್ಟು ಕೂಡಲೇ ರೈತರಿಗೆ ಬೀಜ ಮತ್ತು ಗೊಬ್ಬರ ಸಮರ್ಪಕವಾಗಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ಈರಣ್ಣ ಬುಡಪನಹಳ್ಳಿ, ಮಲ್ಲಿಕಾರ್ಜುನ ತೆಗ್ಗಿನ, ಬಸವರಾಜ ನಲವಾಗಲ, ಸೋಮನಗೌಡ ಪಾಟೀಲ, ಫಕ್ಕಿರಪ್ಪ ಮಾಡೇನಹಳ್ಳಿ, ಬಸವರಾಜ ಹಾದಿಮನಿ, ಫಕ್ಕೀರಡ್ಡಿ ರಂಗರಡ್ಡಿ, ಸಂಪತ್ ನಾಗೇನಹಳ್ಳಿ, ಸಿದ್ದಪ್ಪ ಪೂಜಾರ, ಶೇಖಪ್ಪ ಕೊಪ್ಪದ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net