ಚೆನ್ನಾಗಿ ಓದು ಎಂದಿದ್ದಕ್ಕೆ ನೇಣಿಗೆ ಶರಣಾದ ಮಗ

Crime
Crime
Published on

ಹಾವೇರಿ: "ಚೆನ್ನಾಗಿ ಓದು, ಇಲ್ಲವಾದರೆ ಬೆಂಗಳೂರಿಗೆ ಕರೆದುಕೊಂಡು ಹೋಗುವೆ' ಎಂದು ತಂದೆ ಬುದ್ಧಿವಾದ ಹೇಳಿದ್ದರಿಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಹಾಲಗಿ ಗ್ರಾಮದಲ್ಲಿ ನಡೆದಿದೆ.

ಕಿರಣ ಲಿಂಗರಾಜ ಪಾಟೀಲ (17) ಮೃತ ಬಾಲಕ.

ಈತನಿಗೆ ತಂದೆ ಲಿಂಗರಾಜ "ಓದುವುದನ್ನು ಬಿಟ್ಟು ಕೆಟ್ಟ ಚಟಗಳನ್ನು ಏಕೆ ಮಾಡುತ್ತಿದ್ದೀಯಾ. ಇಲ್ಲಿ ಓದದಿದ್ದರೆ ಬೆಂಗಳೂರಿಗೆ ಕರೆದುಕೊಂಡು ಹೋಗುವೆ' ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದು ಕಿರಣ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net