crop insurance ಬೆಳೆ ವಿಮೆಗಾಗಿ ಗುತ್ತಲ ನಾಡಕಚೇರಿ ಎದುರು ಪ್ರತಿಭಟನೆ

ಗುತ್ತಲದ ನಾಡಕಚೇರಿ ಬಳಿ ಬೆಳೆ ವಿಮೆ (crop insurance)ತುಂಬಿದ್ದ ರೈತರು ಪ್ರತಿಭಟನೆ ನಡೆಸಿದರು.
ಗುತ್ತಲದ ನಾಡಕಚೇರಿ ಬಳಿ ಬೆಳೆ ವಿಮೆ (crop insurance)ತುಂಬಿದ್ದ ರೈತರು ಪ್ರತಿಭಟನೆ ನಡೆಸಿದರು.
Published on

ಬೆಳೆ ವಿಮೆಯಲ್ಲಿ (

crop insurance)

ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರೈತರು ಪಟ್ಟಣದ ನಾಡಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

2021ರಿಂದ 2026ರವರೆಗೆ ನಾವು ಬೆಳೆ ವಿಮೆ ಕಂತು ಪಾವತಿ ಮಾಡುತ್ತಲೇ ಬಂದಿದ್ದೆವೆ. ಕಳೆದ 5 ವರ್ಷಗಳಿಂದ ಬೆಳೆ ಹಾನಿಯಾಗಿವೆ. ಆದರೂ ನಮಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ. ಪಕ್ಕದ ಗ್ರಾಮಗಳಲ್ಲಿ ಬೆಳೆ ವಿಮೆ ಪರಿಹಾರ ನೀಡಲಾಗಿದೆ. ನಮ್ಮ ಜಮೀನುಗಳ ಪಕ್ಕದಲ್ಲಿಯೇ ನಮಗಿಂತ ಉತ್ತಮ ಬೆಳೆ ಇದ್ದರೂ, ಅವರಿಗೆ ಬೆಳೆವಿಮೆಯ ಪರಿಹಾರ ದೊರಕಿದೆ. ನಮ್ಮ ಬೆಳೆ ಹೆಚ್ಚು ಹಾನಿಯಾಗಿದ್ದರೂ ವಿಮೆ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು.
ಬೆಳೆ ಆಣೇವಾರಿ ಬಗ್ಗೆ ನಮಗೆ ಅನುಮಾನಗಳಿವೆ. ರೈತರಿಲ್ಲದಿರುವಾಗ ಬೆಳೆ ಆಣೇವಾರಿ ಮಾಡಲಾಗಿದೆ. ನಮಗೆ ಬೆಳೆ ಹಾನಿ ಆಗಿದ್ದರೂ, ವಿಮೆ ಪರಿಹಾರ ಏಕೆ ದೊರೆತಿಲ್ಲ. ಈ ಎಲ್ಲದರ ಬಗ್ಗೆ ನಮಗೆ ಉತ್ತರ ಬೇಕು. ಬೆಳೆ ವಿಮೆ ಸರ್ವೆಯಲ್ಲಿ ವಿಮಾ ಕಂಪನಿಯವರೊಂದಿಗೆ ಅಧಿಕಾರಿಗಳು ಕೈಜೋಡಿಸಿದ್ದರ ಬಗ್ಗೆ ನಮಗೆ ಅನುಮಾನ ಇದೆ. ನಮಗೆ ಕಳೆದ 5 ವರ್ಷಗಳಿಂದ ಬೆಳೆ ವಿಮೆಯಲ್ಲಿ ಆದ ಅನ್ಯಾಯಕ್ಕೆ ಪರಿಹಾರ ಬೇಕು. ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಮಆಡಳಿತಾಧಿಕಾರಿಗೆ ಪ್ರಕಾಶ ಉಜ್ಜನಿ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡರು. ರೈತರೊಂದಿಗೆ ಸರಿಯಾಗಿ ವತಿರ್ಸಬೇಕು. ಸರ್ವೆ ಸ್ಥಳಕ್ಕೆ ರೈತರನ್ನು ಕರೆದುಕೊಂಡು ಹೋಗಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪಪಂ ಉಪಾಧ್ಯ ಪರಶುರಾಮ ಯಲಗಚ್ಚ ಹಾಗೂ ಸ್ಥಾಯಿ ಸಮಿತಿ ಅಧ್ಯ ಪ್ರದಿಪ ಸಾಲಗೇರಿ ಆಗಮಿಸಿ ರೈತರೊಂದಿಗೆ ಚಚಿರ್ಸಿದರು. ಗುತ್ತಲದ ರೈತರಿಗೆ ಪ್ರತಿವರ್ಷ ಬೆಳೆವಿಮೆ ವಿಚಾರಲ್ಲಿ ಅನ್ಯಾಯವಾಗುತ್ತಿದೆ. ಈ ಬಗ್ಗೆ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕಂದಾಯ ಹಾಗೂ ಕೃಷಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚಚಿರ್ಸಿದರು. ನಂತರ ಜಮೀನುಗಳಲ್ಲಿನ ಸರ್ವೆ ಕಾರ್ಯಕ್ಕೆ ಧರಣಿ ನಿರತ ರೈತರು ಅಧಿಕಾರಿಗಳೊಂದಿಗೆ ಜಮೀನುಗಳಿಗೆ ತೆರಳಿದರು.
ರಾಜಪ್ಪ ಬೆನ್ನೂರ, ಪಿಕೆಪಿಎಸ್​ ಅಧ್ಯ ಚನ್ನಪ್ಪ ಬನ್ನಿಮಟ್ಟಿ, ನಿರ್ದೇಶಕರಾದ ಭರಮಪ್ಪ ಹಾದಿಮನಿ, ವಿರೂಪಾಪ್ಪ ಶೀತಾಳ, ಕೋಟೆಪ್ಪ ಗೊರವರ, ಪರಮೇಶಪ್ಪ ಕುರವತ್ತಿಗೌಡರ, ನಾಗರಾಜ ಗಂಗಣ್ಣನವರ, ಮಲ್ಲಪ್ಪ ಶೀತಾಳ, ಶಂಕ್ರಪ್ಪ ಕಾಗಿನೆಲ್ಲಿ, ಲಕ್ಷ್ಮವ್ವ ಆರೇರ, ಹಾಲಪ್ಪ ಬನ್ನಿಮಟ್ಟಿ, ಅಜ್ಜಪ್ಪ ರೊಟ್ಟಿ, ಗುಡ್ಡಪ್ಪ ಯರವಿನತಲಿ, ಮಂಜುನಾಥ ರೊಟ್ಟಿ, ಪ್ರಕಾಶ ಗಡದ, ವಿರೂಪಾ ಗಡದ, ಕೊಟ್ರಪ್ಪ ಶೆಟ್ಟರ್​, ಬಸವರಾಜ ಗಂಗಣ್ಣನವರ, ನೀಲಪ್ಪ ಕಿತ್ತೂರ, ಬಸವರಾಜ ಕಿತ್ತೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net