

ರಾಣೆಬೆನ್ನೂರ: ತಾಲೂಕಿನಲ್ಲಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗಳನ್ನು ಸ್ವಚ್ಚಗೊಳಿಸಿ ಅವುಗಳ ಮೂಲಕ ತಾಲೂಕಿಗೆ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ತುಂಗಾ ಮೇಲ್ದಂಡೆ ಯೋಜನೆಯಡಿ ನಿಮಾರ್ಣವಾದ ಕಾಲುವೆಗಳನ್ನು ಸ್ವಚ್ಚಗೊಳಿಸಬೇಕು. ತುಂಗಭದ್ರಾ ಮತ್ತು ಕುಮುದ್ವತಿ ನದಿಗಳಿಗೆ ಅಡ್ಡಲಾಗಿ ನಿಮಿರ್ಸಿರುವ ಸೇತುವೆ ಮತ್ತು ಗೇಟ್ಗಳನ್ನು ಸ್ವಚ್ಚಗೊಳಿಸಬೇಕು. ಗ್ರಾಮೀಣ ಮತ್ತು ನಗರಗಳಲ್ಲಿರುವ ಕೆರೆಗಳನ್ನು ಹೂಳೆತ್ತಿ ಬೇಸಿಗೆಯಲ್ಲಿ ದನಕರುಗಳಿಗೆ ನೀರು ಸಂಗ್ರಹವಾಗುವಂತೆ ಮಾಡಬೇಕು.
ಹಳ್ಳಿ ಮತ್ತು ನಗರಗಳಲ್ಲಿ ಹಳೆಯ ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆಗೆದು ಹೊಸ ಕಂಬ ಮತ್ತು ತಂತಿಗಳನ್ನು ಅಳವಡಿಸಬೇಕು. ರೈತರಿಗೆ ಸಮರ್ಪಕವಾದ ಉತ್ತಮ ತಳಿಯ ಬೀಜ ಮತ್ತು ರಸಗೊಬ್ಬರಗಳನ್ನು ಸಂಗ್ರಹಿಸಿಡಬೇಕು. ರೈತ ಸಂಪರ್ಕ ರಸ್ತೆಗಳನ್ನು ಸರಿಪಡಿಸಬೇಕು. ಹಳ್ಳಿ ಮತ್ತು ನಗರಗಳಲ್ಲಿ ಕುಡಿಯುವ ನೀರಿನ ಬಗ್ಗೆ ಕ್ರಮ ಕೈಗೊಳ್ಳಬೇಕು.
ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪೂರೈಸಲು ಸರ್ಕಾರ ಅನುಮತಿ ನೀಡಿದ್ದರೂ ಅಧಿಕಾರಿಗಳು ಅನುದಾನ ಬಿಡುಗಡೆಯಾಗಿಲ್ಲವೆಂದು ಯಂತ್ರೋಪಕರಣಗಳನ್ನು ಪೂರೈಸುತ್ತಿಲ್ಲ. ಅದಕ್ಕೆ ಸರಿಯಾದ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಸಮಯಕ್ಕೆ ಸರಿಯಾಗಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ನೀಡುವಂತೆ ಮತ್ತು ಖರೀದಿಸಲು ತಾವು ಸೂಕ್ತ ನಿರ್ದೇಶನಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತರಾದ ಹನುಮಂತಪ್ಪ ಕಬ್ಬಾರ, ಮಂಜುನಾಥ ಗುಡ್ಡಣ್ಣನವರ, ಕಿರಣ ಗುಳೇದ, ಬಸವರಾಜ ಮೆಗಳಗೇರಿ, ನಾಗರಾಜ ಮಲ್ಲಾಪುರ, ರವಿಕುಮಾರ ಜಿಗಳಿ, ಶಿವಕುಮಾರ ಮಲ್ಲಾಪುರ, ನಾಗರಾಜ ಲಿಂಗದಹಳ್ಳಿ, ಹೊನ್ನಪ್ಪ ಮೂಲಿಗ, ವೀರೇಶ ಮಳಲೇರ, ಪರಸಪ್ಪ ಹರಿಜನ, ಶ್ರೀನಿವಾಸ ಲದ್ವಾ, ಮಾಲತೇಶ ಮಡಿವಾಳರ, ಸತೀಶ ಕಲಾಲ ಮತ್ತಿತರರು ಪಾಲ್ಗೊಂಡಿದ್ದರು.