ಬೆಳೆ ಸಮೀಕ್ಷೆಗೆ ರೈತರ ಆಕ್ಷೇಪ

ಶಿಗ್ಗಾಂವ ತಾಲೂಕಿನ ಹಿರೇಮಲ್ಲೂರ ಗ್ರಾಮದ ಹೊಲಗಳಲ್ಲಿನ ಬೆಳೆಗಳನ್ನು ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಬುಧವಾರ ಪರಿಶೀಲಿಸಿದರು. ಶ್ರೀಧರ ದಾಸರ, ಮೀನಾಕ್ಷಿ ದೊಡಮನಿ ಇತರರಿದ್ದರು.
ಶಿಗ್ಗಾಂವ ತಾಲೂಕಿನ ಹಿರೇಮಲ್ಲೂರ ಗ್ರಾಮದ ಹೊಲಗಳಲ್ಲಿನ ಬೆಳೆಗಳನ್ನು ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಬುಧವಾರ ಪರಿಶೀಲಿಸಿದರು. ಶ್ರೀಧರ ದಾಸರ, ಮೀನಾಕ್ಷಿ ದೊಡಮನಿ ಇತರರಿದ್ದರು.
Published on
ಶಿಗ್ಗಾಂವ:  ತಾಲೂಕಿನಲ್ಲಿ ಪಿಆರ್ ಮೂಲಕ ಕೈಗೊಳ್ಳುತ್ತಿರುವ ಸಮೀಕ್ಷೆಯಲ್ಲಿ ನಮೂದಾದ ಬೆಳೆಗಳ ಬಗ್ಗೆ ರೈತರಿಂದ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಅವರು ಅಧಿಕಾರಿಗಳೊಂದಿಗೆ ಬುಧವಾರ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಏನಾದರೂ ತಪ್ಪು ಮಾಹಿತಿ ದಾಖಲಿಸಿದ್ದರೆ, ರೈತರು ಬೆಳೆ ದರ್ಶಕ್ ಮೊಬೈಲ್ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ತಾಲೂಕಿನ ಚಾಕಾಪುರ, ಅಂದಲಗಿ, ಹಿರೇಮಲ್ಲೂರ, ಬೆಳವಲಕೊಪ್ಪ, ಬಂಕಾಪುರ, ಚಂದಾಪುರ, ತೊರೂರು, ಹೋತನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಂದ 305 ರೈತರಿಂದ ಆಕ್ಷೇಪಣೆ ಸಲ್ಲಿಸಿದ್ದರು ಸಲ್ಲಿಸಿದ್ದರು ಎಂದರು.
 ಆಕ್ಷೇಪಣೆ ಸಲ್ಲಿಸಿದ್ದ ರೈತರ ಹೊಲಗಳಿಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ, ಕೆಲವು ರೈತರು ತಾವು ಬೆಳೆಯದ ಬೆಳೆಗೆ ಪರ್ಯಾಯ ಬೆಳೆ ನಮೂದಿಸಿ ತಪ್ಪು ಮಾಹಿತಿ ನೀಡಿದ್ದನ್ನು ಗಮನಿಸಿ ರೈತರ ಜಮೀನಿನಲ್ಲಿರುವ ಬೆಳೆಯನ್ನೇ ಜಿಪಿಎಸ್ ಮೂಲಕ ಸಮೀಕ್ಷೆ ನಡೆಸಲು ಪಿಆರ್‌ಗಳಿಗೆ ಸೂಚಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕೊಟ್ರೇಶ ಗೆಜ್ಲಿ ಅವರು, ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ನಿಖರವಾದ ಬೆಳೆ ಸಮೀಕ್ಷೆ ಮಾಡಬೇಕು. ರೈತರ ಜಮೀನಿನಲ್ಲಿರುವ ನಿಖರ ಬೆಳೆ ಸಮೀಕ್ಷೆಯಿಂದ ಬೆಳೆ ವಿಮೆ, ಪರಿಹಾರ ಹಾಗೂ ಸರ್ಕಾರದ ಸವಲತ್ತುಗಳು ಅರ್ಹ ರೈತರಿಗೆ ಸರಿಯಾಗಿ ತಲುಪಲು ಸಹಾಯವಾಗುತ್ತದೆ ಎಂದರು.
ಕೃಷಿ ಇಲಾಖೆ ಅಧಿಕಾರಿಗಳಾದ ಶ್ರೀಧರ ದಾಸರ, ಮೀನಾಕ್ಷಿ ದೊಡಮನಿ, ಮಂಗಳಾ ಪಾಟೀಲ, ಪಿಆರ್ ಶಂಕರಗೌಡ ಕರಿಗೌಡ್ರ ಇದ್ದರು.
  • ತಾಲೂಕಿನ ಚಾಕಾಪುರ, ಅಂದಲಗಿ, ಹಿರೇಮಲ್ಲೂರ, ಬೆಳವಲಕೊಪ್ಪ, ಬಂಕಾಪುರ, ಚಂದಾಪುರ, ತೊರೂರು, ಹೋತನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಂದ 305 ರೈತರಿಂದ ಆಕ್ಷೇಪಣೆ ಸಲ್ಲಿಸಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net