

ಹಾನಗಲ್ಲ: ಸಾಲಬಾಧೆಯಿಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಂಡೋಜ್ಜಿ ಗ್ರಾಮದಲ್ಲಿ ನಡೆದಿದೆ.
ಫಕ್ಕೀರಪ್ಪ ಕಾಡನವರ (41) ಮೃತ ರೈತ.
ಇವರು ಕೃಷಿಗಾಗಿ ವಿವಿಧ ಸಂಘಗಳಲ್ಲಿ 40 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಮಳೆ ಕೊರತೆಯಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿ ಹೋಗಿತ್ತು. ಇದರಿಂದ ಮನನೊಂದು ಜಮೀನಿನಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.