ಫ್ಯಾನ್ ಜೋಡಿಸಲು ಹೋದ ಯುವಕ ವಿದ್ಯುತ್ ತಗುಲಿ ಸಾವು

Crime
Crime
Published on

ಬ್ಯಾಡಗಿ: ಮನೆಯಲ್ಲಿ ಫ್ಯಾನ್ ಜೋಡಿಸಲು ಹೋದ ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಹೊಸಶಿಡೇನೂರ ಗ್ರಾಮದಲ್ಲಿ ನಡೆದಿದೆ.

ಅಭಿಷೇಕ ಅಶೋಕ ತೆವರಿ (22) ಮೃತ ಯುವಕ.

ಈತ ಮನೆಯಲ್ಲಿ ಮದುವೆ ಸಮಾರಂಭ ಇರುವ ಕಾರಣ ಹೊಸ ಮನೆಗೆ ಫ್ಯಾನ್ ಜೋಡಿಸಲು ಹೋಗಿದ್ದ. ಈ ಸಮಯದಲ್ಲಿ ಮನೆಗೆ ಯುಪಿಎಸ್ ಜೋಡಿಸಿರುವುದನ್ನು ಗಮನಿಸಿದೆ ವಿದ್ಯುತ್ ಬಂದ್ ಆಗಿದೆ ಎಂದು ತಿಳಿದು ವೈಯರ್ ಹಿಡಿದಿದ್ದಾನೆ. ಈ ಸಮಯದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net