ಸಂಸಾರ ಮಾಡಲು ಬಾರದ ಪತ್ನಿ; ಪತಿ ಆತ್ಮಹತ್ಯೆ

Crime
Crime
Published on

ಹಿರೇಕೆರೂರ: ಮದುವೆ ಮಾಡಿಕೊಂಡ ಹೆಂಡತಿ ಸಂಸಾರ ಮಾಡಲು ಬರುವುದಿಲ್ಲ ಎಂದು ಹೇಳಿದ್ದರಿಂದ ಬೇಸರಗೊಂಡ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಸನಿಡನೇಗಿಲು ಗ್ರಾಮದಲ್ಲಿ ನಡೆದಿದೆ.

ಬೀರಪ್ಪ ಮಲ್ಲಪ್ಪ ಕುರಿಯವರ (29) ಮೃತನು.

ಈತನಿಗೆ 3 ತಿಂಗಳ ಹಿಂದೆ ಕಡದಕಟ್ಟೆ ಗ್ರಾಮದ ಐಶ್ವರ್ಯ ಎಂಬುವಳೊಂದಿಗೆ ಮದುವೆಯಾಗಿತ್ತು. ಮದುವೆಯಾದ 16 ದಿನದ ಬಳಿಕ ಐಶ್ವರ್ಯ ಬಾಳುವೆ ಮಾಡಲು ಬಂದಿದ್ದಳು. ಆದರೆ, ಕೆಲವೇ ದಿನದಲ್ಲಿ ಸಂಸಾರ ಮಾಡದೆ ವಾಪಸ್ ತವರು ಮನೆಗೆ ಹೋಗಿದ್ದಳು. ಆಕೆಯನ್ನು ಕರೆಯಲು ಹೋದ ಬೀರಪ್ಪನಿಗೆ ನಾನು ಬರುವುದಿಲ್ಲ. ನೀವು ಸರಿಯಾಗಿಲ್ಲ ಎಂದು ಹೊಡೆ ನಿನಗೆ ಡೈವೋರ್ಸ್ ಕೊಡುತ್ತೇನೆ ಎಂದು ವಾಪಸ್ ಕಳುಹಿಸಿದ್ದಾಳೆ. ಇದರಿಂದ ಮನನೊಂದು ಬೀರಪ್ಪ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬದ ಗಂಗಮ್ಮ ಕುರಿಯವರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net