ಹಸಿರುಕರಣಕ್ಕಾಗಿ ಸೈಕಲ್ ಸವಾರಿ; ಪರಿಸರ ಸಂರಕ್ಷಣೆ ಜಾಗೃತಿ

ಸೈಕಲ್ ಜಾಥಾ
ಸೈಕಲ್ ಜಾಥಾ
Published on

ರಾಣೆಬೆನ್ನೂರು: ಸ್ಥಳೀಯ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕೃಷ್ಣಮೃಗ ಘಟಕ ವತಿಯಿಂದ ಹಸಿರು ಗ್ರಹಕ್ಕಾಗಿ ಸೈಕಲ್ ಸವಾರಿ ಎಂಬ ಧ್ಯೇಯವಾಕ್ಯದೊಂದಿಗೆ 10 ರಿಂದ 18 ವರ್ಷದ ಮಕ್ಕಳಿಗಾಗಿ ಆಯೋಜಿಸಿದ್ದ ಸಾಹಸ ಸೈಕ್ಲಿಂಗ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಜಾಥಾಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಉತ್ತಮ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಸೈಕಲ್ ಸವಾರಿ ಪೂರಕವಾಗಿದೆ. ಇದರಿಂದ ಇಂಧನ ಉಳಿತಾಯವಾಗುವ ಮೂಲಕ ದೇಶದ ಆಥಿರ್ಕತೆ ಸದೃಢಗೊಳ್ಳಲು ಕಾರಣವಾಗುತ್ತದೆ ಎಂದರು.

ನಗರದ ನ್ಯಾಯಾಲಯದ ಆವರಣದಿಂದ ಹೊರಟ ಸೈಕಲ್ ಸವಾರರು 8 ಕಿ.ಮೀ ದೂರದ ಮೈದೂರ ಫಾಮ್ರ್ಗೆ ತಲುಪಿ ಅಲ್ಲಿ ಉಪಹಾರ ಸೇವಿಸಿದರು. ನಂತರ ಅಲ್ಲಿಂದ ಮರು ಪ್ರಯಾಣ ಹೊರಟ ಸೈಕಲ್ ಸವಾರರು ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತಲುಪಿ ಜಾಥಾ ಕೊನೆಗೊಳಿಸಿದರು.

ಪ್ರಮುಖರಾದ ಡಾ. ಮನೋಜ ಸಾವಕಾರ, ಗದಿಗೆಪ್ಪಗೌಡ ಹೊಟ್ಟಿಗೌಡರ, ಸುಧೀರ ಕುರವತ್ತಿ, ಬಸವರಾಜ ಹುಲ್ಲತ್ತಿ, ಶಿಲ್ಪಾ ಸಾವಕಾರ, ರೋಹಿತ ಅಗರವಾಲ, ಸುಮಾ ಹೊಟ್ಟಿಗೌಡರ, ವಿದ್ಯಾ ಕುರವತ್ತಿ, ಸುಮಾ ಉಪ್ಪಿನ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net