

ಶಿಗ್ಗಾಂವ: ಕೆಇಬಿ ಕಂಬಕ್ಕೆ ಬಿಎಸ್ಎನ್ಎಲ್ ಫೈಬರ್ ಲೈನ್ ಕೇಬಲ್ಅನ್ನು ಕಟ್ಟುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಅತ್ತಿಗೇರಿ ಗ್ರಾಮದ ಬಳಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಹಿರೇಹಳ್ಳಿ ಗ್ರಾಮದ ಪ್ರಕಾಶ ರಾಮಕೃಷ್ಣ ಕೃಷ್ಣಾಜಿಯವರ (35) ಮೃತ ವ್ಯಕ್ತಿ.
ಈತ ಕೆಇಬಿ ಕಂಬಕ್ಕೆ ಬಿಎಸ್ಎನ್ಎಲ್ ಫೈಬರ್ ಲೈನ್ ಕೇಬಲ್ಅನ್ನು ಕಟ್ಟುತ್ತಿದ್ದ ಸಮಯದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.