Appeal ಸರ್ಕಾರಿ ಪ್ರೌಢಶಾಲೆವರೆಗೆ ಬಸ್ ಓಡಿಸಿ

ಬಸ್ ಸಂಚಾರಕ್ಕೆ ಒತ್ತಾಯಿಸಿ ಮಾರನಬೀಡ ಗ್ರಾಮಸ್ಥರು ಹಾನಗಲ್ಲ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಅಶೋಕ ಸಂಶಿ, ಕಾಂತೇಶಗೌಡ ಪಾಟೀಲ, ಯಲ್ಲಪ್ಪ ವಡ್ಡರ, ಹನುಮಂತಪ್ಪ ಡುಮ್ಮಣ್ಣನವರ, ಸಿದ್ದಪ್ಪ ಪೂಜಾರ ಇತರರಿದ್ದರು.
ಬಸ್ ಸಂಚಾರಕ್ಕೆ ಒತ್ತಾಯಿಸಿ ಮಾರನಬೀಡ ಗ್ರಾಮಸ್ಥರು ಹಾನಗಲ್ಲ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಅಶೋಕ ಸಂಶಿ, ಕಾಂತೇಶಗೌಡ ಪಾಟೀಲ, ಯಲ್ಲಪ್ಪ ವಡ್ಡರ, ಹನುಮಂತಪ್ಪ ಡುಮ್ಮಣ್ಣನವರ, ಸಿದ್ದಪ್ಪ ಪೂಜಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾನಗಲ್ಲ ಡಿಪೋ ಮ್ಯಾನೇಜರ್‌ಗೆ ಮಾರನಬೀಡ ಗ್ರಾಮಸ್ಥರ ಮನವಿ
ಹಾನಗಲ್ಲ: ಮಾರನಬೀಡ ಗ್ರಾಮದ ಪ್ರೌಢಶಾಲೆವರೆಗೆ ಬಸ್ ಓಡಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ವಾಕರಸಾ ಸಂಸ್ಥೆಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ಮನವಿ ಸಲ್ಲಿಸಿದ್ದಾರೆ.
ಮಾರನಬೀಡ ಗ್ರಾಪಂ ಆಡಳಿತಾಧಿಕಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ. ಸುರೇಶ ಹಾಗೂ ಹಾನಗಲ್ಲ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಮಾರನಬೀಡ ಸರ್ಕಾರಿ ಪ್ರೌಢಶಾಲೆಗೆ 150 ವಿದ್ಯಾರ್ಥಿಗಳು ವಿವಿಧ ಗ್ರಾಮಗಳಿಂದ ಬರುತ್ತಾರೆ. ಬಸ್ ಮಾರನಬೀಡ ಗ್ರಾಮದವರೆಗೂ ಬರುತ್ತದೆ. ಆದರೆ, ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಹೋಗಿ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಪ್ರೌಢಶಾಲೆಯ ಬಳಿ ಬಹಳಷ್ಟು ಮನೆಗಳೂ ಇವೆ. ಇಲ್ಲಿಗೆ ಹೋಗಬೇಕಾದ ಜನರಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಅಲ್ಲಿಯವರೆಗೂ ಬಸ್ ಓಡಿಸಬೇಕು. ಪಕ್ಕದ ಕಾಲ್ವೆಕಲ್ಲಾಪುರ ಹಾಗೂ ನೆಲ್ಲಿಬೀಡ ಗ್ರಾಮಗಳಿಗೆ ಈವರೆಗೂ ಬಸ್ ವ್ಯವಸ್ಥೆಯೇ ಆಗಿಲ್ಲ. ಕೂಡಲೇ ಬಸ್ ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾರನಬೀಡ ಗ್ರಾಮದ ಅಶೋಕ ಸಂಶಿ, ಕಾಂತೇಶಗೌಡ ಪಾಟೀಲ, ಯಲ್ಲಪ್ಪ ವಡ್ಡರ, ಹನುಮಂತಪ್ಪ ಡುಮ್ಮಣ್ಣನವರ, ಸಿದ್ದಪ್ಪ ಪೂಜಾರ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net