ಓಣಿಯ ಎರಡು ಬದಿಯಲ್ಲಿ ಯಾವುದೇ ಗಟಾರ ನಿರ್ಮಾಣ ಮಾಡದೆ ಇರುವುದರಿಂದ ಎಲ್ಲ ಮನೆಗಳ ತ್ಯಾಜ್ಯ ಮತ್ತು ಕೊಳಚೆಯ ನೀರು ಮನೆಗಳ ಮುಂದೆ ನಿಂತು ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನ ದುರ್ವಾಸನೆಯಿಂದ ನಿವಾಸಿಗಳು ಬೇಸತ್ತು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರ ಪರಿಣಾಮವಾಗಿ ಒಂದು ತಾತ್ಕಾಲಿಕ ಗುಂಡಿ ನಿರ್ಮಾಣ ಮಾಡಲಾಗಿದೆ. ಕೊಳಚೆ ನೀರಿ ಈ ಗುಂಡಿಗೆ ಬಂದು ನೇರವಾಗಿ ಸೇರುತ್ತಿದೆ. ಆ ನೀರು ಮುಂದೆ ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕೆ ಗಬ್ಬೇದ್ದು ನಾರುತ್ತಿದೆ. ಗುಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಓಣಿಯಲ್ಲಿ ಪಾಂಡುರಂಗನ ದೇವಸ್ಥಾನ ಇರುವುದರಿಂದ ನಿತ್ಯ ಆಗಮಿಸುವ ಭಕ್ತರಿಗೆ ಇಲ್ಲಿನ ಕೊಳಚೆಯ ದುರ್ವಾಸನೆ ಕಿರಿಕಿರಿಯಾಗುತ್ತದೆ.