

ಹಿರೇಕೆರೂರ: ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಹೋರಿ ಹಬ್ಬ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಇಲ್ಲಿಯ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಟ್ಟಿಹಳ್ಳಿ ತಾಲೂಕಿನ ಹಿರೇಮತ್ತೂರ ಗ್ರಾಮದ ಮಾರುತಿ ಶಿವಪ್ಪ ಪೂಜಾರ, ಹನುಮಂತಪ್ಪ ನಾಗಪ್ಪ ಆಲದಗೇರಿ, ನದೀಶ ಬಸವಣ್ಣೆಪ್ಪ ಬಣಕಾರ, ಕೋಡ ಗ್ರಾಮದ ಶಾಮನಗೌಡ ಸಣ್ಣಗೌಡ ಪಾಟೀಲ, ಗಂಗಾಪುರ ಗ್ರಾಮದ ರಿಯಾಜಖಾನ ಮಹ್ಮದಖಾನ್ ತುಮ್ಮಿನಕಟ್ಟಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರು ಜಿಲ್ಲಾಧಿಕಾರಿ ಅನುಮತಿ ನೀಡದಿದ್ದರೂ ಕೊಬ್ಬರಿ ಹೋರಿ ಸ್ಪರ್ಧೆ ಆಯೋಜಿಸಿ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.