ಫುಟ್‌ಪಾತ್, ರಸ್ತೆ ಅತಿಕ್ರಮಣ ತೆರವಿಗೆ ಸೂಚನೆ

ನಿಯಮ ಪಾಲಿಸದಿದ್ದರೆ ದಂಡದ ಎಚ್ಚರಿಕೆ
Tehsildar Vithala Chougala issued strict instructions to the owners of vegetable shops who had encroached upon the footpath along the Tadas-Gondi road in Hangal.
ಹಾನಗಲ್ಲಿನ ತಡಸ-ಗೊಂದಿ ರಸ್ತೆಯಲ್ಲಿನ ಫುಟ್‌ಪಾತ್ ಅತಿಕ್ರಮಿಸಿದ ತರಕಾರಿ ಅಂಗಡಿ ಮಾಲೀಕರಿಗೆ ತಹಸೀಲ್ದಾರ್ ವಿಠಲ ಚೌಗಲಾ ಕಟ್ಟುನಿಟ್ಟಿನ ಸೂಚನೆ ನೀಡಿದರು.
Published on: 

ಹಾನಗಲ್ಲ: ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ತಡಸ-ಗೊಂದಿ ರಸ್ತೆ ಮತ್ತು ಇದಕ್ಕೆ ಹೊಂದಿಕೊಂಡ ರಸ್ತೆಗಳಲ್ಲಿನ ಕಾನೂನುಬಾಹಿರ ವಾಹನ ನಿಲುಗಡೆ, ಗೂಡಂಗಡಿ, ರಿಕ್ಷಾ ನಿಲುಗಡೆ, ವಿವಿಧ ಅಂಗಡಿಗಳ ತೆರವಿಗೆ ಸೂಚಿಸಲಾಯಿತು.

ತಹಸೀಲ್ದಾರ್ ವಿಠಲ್ ಚೌಗಲಾ ನೇತೃತ್ವದಲ್ಲಿ ಪುರಸಭೆ ಮುಖ್ಯಾಽಕಾರಿ ವೈ.ಕೆ. ಜಗದೀಶ, ಪಿಎಸ್‌ಐ ರಮೇಶ ಹಾಗೂ ಅಽಕಾರಿಗಳ ತಂಡ ಸೋಮವಾರ ಸಂಚಾರ ನಡೆಸಿ ಪಟ್ಟಣದ ಮಹಾತ್ಮ ಗಾಂಽ ವೃತ್ತ, ತಹಸೀಲ್ದಾರ್ ಕಚೇರಿ ರಸ್ತೆ, ತಡಸ-ಗೊಂದಿ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಿಸಿಕೊಂಡ ತರಕಾರಿ, ಹೂವು ಸೇರಿದಂತೆ ವಿವಿಧ ಅಂಗಡಿಗಳವರಿಗೆ, ರಸ್ತೆ ಪಕ್ಕ ನಿಲ್ಲಿಸಿರುವ ತಳ್ಳುಗಾಡಿಗಳು, ಗೂಡಂಗಡಿ, ರಿಕ್ಷಾ, ಟೆಂಪೋ ಮಾಲೀಕರಿಗೆ ಮುನ್ಸೂಚನೆ ನೀಡಿ, ಮಂಗಳವಾರ ಬೆಳಗ್ಗೆಯಿಂದ ವಾಹನ ಹಾಗೂ ಅಂಗಡಿಗಳಿಗೆ ದಂಡ ವಿಽಸಿ ತೆರವುಗೊಳಿಸುವ ಎಚ್ಚರಿಕೆ ನೀಡಿದರು.

ಈಗಾಗಲೇ ಸೂಚನೆ ನೀಡಿ, ಕಾನೂನುಬಾಹಿರವಾಗಿ ಅಂಗಡಿ ಹಾಕಿರುವುದನ್ನು ತೆರವುಗೊಳಿಸಬೇಕು. ಎಲ್ಲೆಂದರಲ್ಲಿ ಬಿಟ್ಟು ನಿಗದಿತ ಸ್ಥಳದಲ್ಲಿಯೇ ವಾಹನ ನಿಲುಗಡೆ ಮಾಡಬೇಕು ಎಂದು ಪ್ರಕಟಿಸಲಾಗಿತ್ತು. ಆದಾಗ್ಯೂ ವಾಹನ ಚಾಲಕರು ನಿಯಮ ಪಾಲಿಸುತ್ತಿಲ್ಲ. ಫುಟ್‌ಪಾತ್ ಮತ್ತು ರಸ್ತೆಯಲ್ಲಿನ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ.ಹೀಗಾಗಿ, ತಹಸೀಲ್ದಾರ್ ನೇತೃತ್ವದಲ್ಲಿಯೇ ಎಲ್ಲ ಇಲಾಖೆಗಳ ಅಕಾರಿಗಳು ಸೋಮವಾರ ಜಾಗೃತಿ ಸಂಚಾರ ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಕುರಿತು ವಿವರ ನೀಡಿದ ತಹಸೀಲ್ದಾರ್ ವಿಠಲ ಚೌಗಲ, ಪಟ್ಟಣದ ತಡಸ-ಗೊಂದಿ ರಸ್ತೆ ಸೇರಿದಂತೆ ಹಲವೆಡೆ ವಾಹನ ನಿಲುಗಡೆಗೆ ನಿರ್ದಿಷ್ಟ ಸ್ಥಳ ಸೂಚಿಸಲಾಗಿದೆ. ನಿಗದಿತ ಸ್ಥಳದಲ್ಲಿಯೇ ವಾಹನ ನಿಲುಗಡೆ ಮಾಡಬೇಕು. ಅದರಂತೆ ರಿಕ್ಷಾ, ಟೆಂಪೋಗಳನ್ನು ನಿರ್ದೇಶಿಸಿದ ಜಾಗದಲ್ಲಿಯೇ ನಿಲ್ಲಿಸಬೇಕು. ರಸ್ತೆ, ಫುಟ್‌ಪಾತ್ ಮೇಲಿನ ಗೂಡಂಗಡಿ ಹಾಗೂ ಇತರೆ ಹಣ್ಣು, ತರಕಾರಿ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಕಾನೂನು ಪಾಲಿಸದಿದ್ದಲ್ಲಿ ತಪ್ಪಿತಸ್ಥರಿಗೆ ದಂಡ ಹಾಕಿ, ಅವುಗಳ ಎತ್ತಂಗಡಿ ಮಾಡಲಾಗುವುದು. ಮಂಗಳವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗುವುದು ಎಂದು ತಿಳಿಸಿದರು.