ಅನಾದಿಕಾಲದ ವೀರಶೈವ ಲಿಂಗಾಯತ ಧರ್ಮ ಉಳಿವಿಗೆ ಶ್ರಮಿಸಿ; ದಿಂಗಾಲೇಶ್ವರ ಸ್ವಾಮೀಜಿ

ಪಠ್ಯಪುಸ್ತಕ ವಿತರಣೆ
ಪಠ್ಯಪುಸ್ತಕ ವಿತರಣೆ
Published on

ರಾಣೆಬೆನ್ನೂರು: ಅನಾದಿಕಾಲದ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯತ ಧರ್ಮಕ್ಕೆ ಅನಾದಿಕಾಲದಿಂದಲೂ ತನ್ನದೆಯಾದ ತತ್ವ ಸಿದ್ಧಾಂತದ ಪರಂಪರೆಯಿದೆ. ಆದರೆ, ಇಂದು ಕವಲುದಾರಿಯಲ್ಲಿ ಸಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಬಾಲೇಹೊಸೂರ ಮತ್ತು ಶಿರಹಟ್ಟಿ ಮಹಾ ಸಂಸ್ಥಾನಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ದೊಡ್ಡಪೇಟೆ ಪಂಚಾಚಾರ್ಯ ಗುರು ಕಾರುಣ್ಯ ಮಂಗಲ ಮಂದಿರದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆ, ವೀರಶೈವ ಲಿಂಗಾಯತ ನೌಕರರ ವೇದಿಕೆ ವತಿಯಿಂದ ಆಯೋಜಿಸಿದ್ದ ಸಮಾಜದಲ್ಲಿ ಆಥಿರ್ಕವಾಗಿ ಹಿಂದುಳಿದ ವಿದ್ಯಾಥಿರ್ಗಳಿಗೆ ಲೇಖನ ಸಾಮಗ್ರಿ, ಸಮವಸ್ತ್ರ- ಹಾಗೂ ಧನಸಹಾಯ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಸತಿ, ಸಂಸ್ಕಾರ, ಆಚಾರ, ವಿಚಾರ, ಮತ್ತು ಧರ್ಮದ ತತ್ವ ಸಿದ್ಧಾಂತದ ಅಡಿಯಲ್ಲಿ ನಮ್ಮ ಪೂರ್ವಜರು, ಗುರುಗಳು ಮತ್ತು ಸಮಾಜದ ಆನುಯಾಯಿಗಳು ಬದುಕಿ ಬಾಳಿದ್ದಾರೆ. ಇಂದಿನ ಮಕ್ಕಳಲ್ಲಿ ಆ ಪರಂಪರೆ ಉಳಿದಿಲ್ಲ, ಪರಿಣಾಮ ಸಮಾಜ ಒಂದುಗೂಡಿಸಲು ಹೊರಟಷ್ಟು ಮತ್ತಷ್ಟು ಒಡೆಯುತ್ತಲೇ ಸಾಗಿದೆ ಎಂದು ವಿಷಾದಿಸಿದರು.

ವೀರಶೈವ ಲಿಂಗಾಯತ ಸಮಾಜ ಕಟ್ಟಲು ಅಂದಿನ ದೂರ ದೃಷ್ಟಿಯುಳ್ಳ ಲಿಂಗೈಕ್ಯೆ ಹಾನಗಲ್ಲ ಕುಮಾರ ಶಿವಯೋಗಿಗಳು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅವರ ಆಸೆ ಎಲ್ಲರೂ ಒಂದೇ ಅಡಿಯಲ್ಲಿ ಇರಬೇಕು ಎನ್ನುವುದಾಗಿತ್ತು. ಆದರೆ ಇಂದು ಆಗುತ್ತಿರುವುದೇನು? ಎಂದು ಪ್ರಶ್ನಿಸಿದರು.

ವೀರಶೈವ ಲಿಂಗಾಯತ ವ್ಯಕ್ತಿ ಪ್ರಧಾನ ಧರ್ಮವಲ್ಲ. ತತ್ವ ಪ್ರಧಾನವಾಗಿದೆ. ಅಷ್ಟಾವರಣ, ಪಂಚಾಚಾರ, ಷಟ್ ಸ್ಥಳ, ಈ ಮೂರು ತತ್ವಗಳು ಗಮನದಲ್ಲಿರಿಸಿಕೊಂಡು ಸಮಾಜ ಕಟ್ಟಬೇಕು. ಸಮಾಜದ ಜಾಗೃತಿ ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಅಂತರಂಗದ ಜಾಗೃತಿಯಾಗಿರಬೇಕು. ಮನೆ ಮನಗಳಲ್ಲಿ ಸಂಘಟನೆಯಾಗಬೇಕು. ಮತ್ತೊಂದು ಸಮಾಜವು ತುಳಿದು ಬೆಳೆಯುವುದು ಬೇಡ. ತಿಳಿದು ಬೆಳೆಯುವ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು ಎಂದರು.

ನೇತೃತ್ವ ವಹಿಸಿದ್ದ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಪ್ರಮುಖರಾದ ವೀರೇಶ ಮೋಟಗಿ, ಬಸವರಾಜ ಪಾಟೀಲ, ಡಾ. ಎಸ್.ಎಸ್. ಬಣಗಾರ, ಮಂಜುನಾಥ ಗೌಡಶಿವಣ್ಣನವರ, ಎಸ್.ಎಸ್. ರಾಮಲಿಂಗಣ್ಣನವರ, ಮಲ್ಲಣ್ಣ ಅಂಗಡಿ, ಎಸ್.ಸಿ. ಷಡಕ್ಷರಿಮಠ, ಜಗದೀಶ ಮಳೆಮಠ, ಸಿದ್ದಣ್ಣ ಚಿಕ್ಕಬಿದರಿ, ಶೇಖಣ್ಣ ಹೊಸಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net