ಮೋಟೆಬೆನ್ನೂರಿನಿಂದ ರೈಲು ನಿಲ್ದಾಣ, ಹಳೇಪೊಲೀಸ್ ಠಾಣೆ, ಸುಭಾಸ ಸರ್ಕಲ್, ಕದರಮಂಡಲಗಿ ಕ್ರಾಸ್, ಕಲಾಭವನ, ಸರ್ಕಾರಿ ಆಸ್ಪತ್ರೆ, ಅಗಸನಹಳ್ಳಿ, ಪದವಿ ಕಾಲೇಜ್, ಡಿಪ್ಲೋಮಾ ಕಾಲೇಜ್ ಮಾರ್ಗದಿಂದ ಶಿಡೇನೂರಿಗೆ ಮಿನಿ ಬಸ್ ಓಡಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಈ ಕುರಿತು ಸ್ಥಳಿಯ ಶಾಸಕರು, ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.