ಡಿಎಸ್ಎಸ್ ತಾಲೂಕಾಧ್ಯಕ್ಷ ಚಂದ್ರಶೇಖರ ಗದಗಕರ ಮಾತನಾಡಿ, ಬೇಡಿಕೆ ಈಡೇರಿಸುವಲ್ಲಿ ವಿಫಲವಾದರೆ, ಮುಂದಿನ 20 ದಿನಗಳ ಬಳಿಕ ಅಗಸನಹಳ್ಳಿ, ರಾಮಗೊಂಡನಹಳ್ಳಿ, ಶಿಡೇನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ರೈತರು ಎತ್ತಿನ ಚಕ್ಕಡಿ, ಕುರಿ ಹಾಗೂ ಜಾನುವಾರುಗಳ ಸಮೇತ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.