ಪ್ರತಿಬಾರಿ ಪದವಿ ವಿದ್ಯಾರ್ಥಿಗಳಿಗೆ ಬಾರಿ ಅನ್ಯಾಯವಾಗುತ್ತಿದೆ. ಈ ಹಿಂದೆ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗಳಲ್ಲಿ ಪಠ್ಯಕ್ರಮ ವ್ಯವಸ್ಥಿತವಾಗಿ ನಡೆಯಲಿಲ್ಲ. ಈಗ ಪಠ್ಯಕ್ರಮ, ಪಠ್ಯಪುಸ್ತಕ ಮುದ್ರಣವಾಗದೆ ಕನ್ನಡ ಭಾಷೆಯ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ. ಸೆಮಿಸ್ಟರ್ ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಮುಖಂಡ ಅರುಣ ನಾಗವತ್ ಮಾತನಾಡಿ, ಪಠ್ಯಕ್ರಮ ವಿಳಂಬದಿಂದಾಗಿ ಉಪನ್ಯಾಸಕರ ಸಾಮಾನ್ಯ ವಿಷಯಗಳ ಬಗ್ಗೆ ಮಾತ್ರ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿಯ ಪ್ರಕಾರ ಇನ್ನೊಂದು ವಾರದ ನಂತರ ಕಿರುಪರೀಕ್ಷೆ ಪ್ರಾರಂಭವಾಗುತ್ತಿದೆ. ಪಠ್ಯಕ್ರಮವನ್ನು ಪಿಡಿಎಫ್ ಮಾದರಿಯಲ್ಲೂ ಪಠ್ಯಕ್ರಮ ಒದಗಿಸಿಲ್ಲ ಎಂದು ದೂರಿದರು.
ಪ್ರತಿಬಾರಿಯೂ ಯಾವುದಾದರೂ ಒಂದು ಗೊಂದಲದಲ್ಲಿ ವಿದ್ಯಾರ್ಥಿಗಳನ್ನು ತಳ್ಳುವ ವ್ಯವಸ್ಥೆ ರೂಢಿಗತವಾಗಿ ಬರುತ್ತಿದೆ. ಈ ವ್ಯವಸ್ಥೆ ನಿಲ್ಲಬೇಕು. ಇದರಿಂದ ಅಭ್ಯಾಸಕ್ಕೆ ಬಾರಿ ಹೊಡೆತ ಬೀಳುತ್ತದೆ. ವಿವಿ ಕುಲಪತಿ ಹಾಗೂ ಕುಲಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಪಠ್ಯಕ್ರಮ ಬಿಡುಗಡೆ ಮಾಡಿ, ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕವನ ಬಡಿಗೇರ, ಸುಪ್ರಿತಾ ಕನ್ನೂರು, ಪ್ರತಿಭಾ ಕಾನಣ್ಣನವರ, ಪ್ರಿಯಾ ಇಳಿಗೇರ, ರಕ್ಷಿತಾ ಕಾಳಿ, ರಕ್ಷಿತಾ ಚಿಕ್ಕಣ್ಣನವರ, ಜಯಲಕ್ಷ್ಮೀ ಸಿ, ಕವಿತಾ ಎಚ್, ಮಲ್ಲಿಕ್ ಗುಂಡಳ್ಳಿ, ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.