ಹೋಮ್ ಡೆಲೆವರಿ ಹೆಸರಿನಲ್ಲಿ 8.69 ಲಕ್ಷ ರೂ. ವಂಚನೆ

Crime
Crime
Published on

ಹಾವೇರಿ: ಬೈ ಜಿಯೋ ಸಿಮ್ ಹೋಮ್ ಡೆಲೆವರಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದ ವ್ಯಾಪಾರಿಯೊಬ್ಬರ ಖಾತೆಯಿಂದ 8.69 ಲಕ್ಷ ರೂ.ಅನ್ನು ಬೇರೆ ಬೇರೆ ಖಾತೆಗಳಿಂದ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವಣೂರಿನ ವ್ಯಾಪಾರಿ ಬಸನಗೌಡ ಶೇಖರಗೌಡ ಪಾಟೀಲ ಎಂಬುವರಿಗೆ ಮೋಸ ಮಾಡಿರುವುದು.

ಇವರು ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು ಅದಕ್ಕಾಗಿ 8 ಲಕ್ಷ ರೂ. ಲೋನ್ ಸಹ ತೆಗೆದುಕೊಂಡಿದ್ದರು. ಆದರೆ, ೋನ್ ಪೇನಲ್ಲಿ ರಿಚಾರ್ಜ ಮಾಡುವ ಸಮಯದಲ್ಲಿ "ಬೈ ಜಿಯೋ ಸಿಮ್ ಹೋಮ್ ಡೆಲೆವರಿ' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಇದನ್ನು ಓಕೆ ಕೂಡ ಮಾಡಿದ್ದಾರೆ. ಆದರೆ, ವಾರ ಕಳೆದರೂ ಸಿಮ್ ಮನೆಗೆ ಬಾರದ ಕಾರಣ ಜಿಯೋ ಕಚೇರಿಗೆ ತೆರಳಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಆಗ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅವರ ಖಾತೆಯಿಂದ 8.69 ಲಕ್ಷ ರೂ. ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net