

ರಾಣೆೆಬೆನ್ನೂರ: ಕುಟುಂಬದವರು ಕೂಡಿದ್ದ ಸಮಯದಲ್ಲಿ ಮಾಡಿದ್ದ ಸಾಲ ತೀರಿಸಲು ಒತ್ತಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಡೆತ್ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಸುಣಕಲ್ಲಬಿದರಿ ಗ್ರಾಮದಲ್ಲಿ ನಡೆದಿದೆ.
ಪ್ರವಿಣ ನಂದೀಶ್ವರಪ್ಪ ಲಿಂಗದಹಳ್ಳಿ (37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಪ್ರಕರಣಕ್ಕೆ ಸಂಬಂಧಿಸಿ ಈತನ ಚಿಕ್ಕಪ್ಪನಾದ ಪರಮೇಶ್ವರಪ್ಪ ಲಿಂಗದಹಳ್ಳಿ, ಶಶಿಕಲಾ ಲಿಂಗದಹಳ್ಳಿ ಹಾಗೂ ವಿಶಾಲ ಲಿಂಗದಹಳ್ಳಿ ವಿರುದ್ಧ ಇಲ್ಲಿಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರು ನಾವು ಕೂಡಿದ್ದ ಸಮಯದಲ್ಲಿ ಮಾಡಿದ್ದ ಸಾಲವನ್ನು ಇದೀಗ ತೀರಿಸುವಂತೆ ಪಡಿಸುತ್ತಿದ್ದರು. ನನ್ನ ಮಗನಿಗೆ ೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಗ ಪ್ರವಿಣ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ನೋಟ್ನಲ್ಲಿ ವಿವರ...
ಪ್ರವಿಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪರಮೇಶ್ವರಪ್ಪ ಲಿಂಗದಹಳ್ಳಿ, ಶಶಿಕಲಾ ಲಿಂಗದಹಳ್ಳಿ ಹಾಗೂ ವಿಶಾಲ ಲಿಂಗದಹಳ್ಳಿ ನನ್ನ ಸಾವಿಗೆ ಕಾರಣವಾಗಿದ್ದಾರೆ. ಇವರು ಸಾಲದ ಒತ್ತಡ ನನ್ನ ಮೇಲೆ ಹಾಕಿ ಕಿರುಕುಳ ನೀಡಿದ್ದಾರೆ. ಇವರಿಗೆ ಯಾವುದೇ ಜಾಮೀನು ಮಂಜೂರು ಆಗಬಾರದು. ಸಾಯೋತನಕ ಜೈಲಿನಲ್ಲಿ ಇರಬೇಕು ಹಾಗೆ ಮಾಡಿ ಎಂದು ಡೇತನೋಟ್ನಲ್ಲಿ ಬರೆದಿದ್ದಾನೆ.
ಅಲ್ಲದೆ ಪ್ರವಿಣ ತನ್ನ ಮದುವೆ ಸಾಲ ಇತ್ತು. ಇದರ ಮೇಲೆ ಮತ್ತೇ ಟ್ರಾ$್ಯಕ್ಟರ್ ಕೊಡಿಸಿ ಅದರ ಸಾಲವನ್ನು ಪರಮೇಶ್ವರಪ್ಪ ನನ್ನ ಮೇಲೆ ಹೇರಿದ್ದ. ನಂತರ ದುಡಿದು ಸಾಲ ತೀರಿಸು ಎಂದು ಪಿಡಿಸುತ್ತಿದ್ದರು. ನಮ್ಮ ಜಮೀನು ಸಹ ಸಾಲಕ್ಕಾಗಿ ಮಾರಾಟ ಮಾಡಿಸಿದ್ದಾರೆ ಎಂದು ಡೆತ್ನೋಟ್ನಲ್ಲಿ ವಿವರವಾಗಿ ಬರೆದು ಮನೆ ಗೋಡೆಗೆ ಅಂಟಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಹಲಗೇರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.